ಬಿಜೆಪಿ ಕಛೇರಿಯಲ್ಲಿ ಸಂತ ಸೇವಲಾಲ ಮಹಾರಾಜರ ಜಯಂತಿ ಆಚರಣೆ

ಪಟ್ಟಣ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸಂತ ಶ್ರೀ ಸೇವಲಾಲ ಮಹಾರಾಜರ 286ನೇ ಜಯಂತಿ ಅಂಗವಾಗಿ ಮುಖಂಡರು ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ,
ಬುದ್ಧ, ಬಸವ, ಕಬೀರ, ಗುರು ನಾನಕ್ ಸೇರಿದಂತೆ ಮುಂತಾದ ಧಾರ್ಮಿಕ ಮಾನವತವಾದಿಗಳ ಮಧ್ಯೆ ಒಬ್ಬ ಸಾಮಾನ್ಯ ದನಗಳನ್ನು ಮೇಯಿಸುತ್ತ ಗೋಪಾಲಕನಾಗಿದ್ದವರು ಶ್ರೀ ಸಂತ ಸೇವಾಲಾಲ ಮಹಾರಾಜರು ಎಂದರು.

ತಮ್ಮ ಜೀವನಾನುಭವದ ಮೂಲಕ ಗೌರಯುತ ಮಾತುಗಳಲ್ಲಿ ಸತ್ಯ, ಅಹಿಂಸಾ ಮಾರ್ಗಗಳನ್ನು ಪ್ರಕಾಶಗೊಳಿಸುವ ನಿಟ್ಟಿನಲ್ಲಿ ತಮ್ಮ ಬೋಧನೆಯನ್ನು ನಡೆಸಿದರು. ಒಂದು ಸಹೋದರತ್ವದ, ಭ್ರಾತೃತ್ವದ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು ಎಂದರು.

ಇಂತ ಮಾನವತಾವಾದಿಯ ಜನನದ ಮತ್ತು ಜೀವನ ಮೌಲ್ಯಗಳು ಇಂದು ತಾಂಡಾಗಳಲ್ಲಿ ಜನ ಜನಿತವಾಗಿರುವದು ಇಂದು ನಾವು ಕಾಣುತ್ತಿದ್ದೆವೆ.
ಹಲವಾರು ಅಜ್ಞಾನ, ಮೌಢ್ಯತೆಯ ಪರಾಕಾಷ್ಟೆ ತಲುಪಿ ಅಂಧಕಾರಲ್ಲಿ ಮುಳಗಿರುವ ಸಂದರ್ಭದಲ್ಲಿ ಸಾಮಾನ್ಯ ಸರಳ ವ್ಯಕ್ತಿ ಸದ್ಗುರು ಸೇವಾಲಾಲರ ಅನುಭವದ ಜ್ಞಾನದ ನುಡಿಗಳು ಇಂದಿಗೂ ಮಾರ್ಗದರ್ಶನವಾಗಿವೆ ಎಂದರು.

ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ ವಾಲ್ಮೀಕ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್.ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಭೀಮಶಾ ಜೀರೊಳ್ಳಿ, ಅರ್ಜುನ ಕಾಳೆಕರ್, ಹರಿ ಗಲಾಂಡೆ, ಶರಣಗೌಡ ಚಾಮನೂರ, ಭೀಮರಾವ ದೊರೆ, ಯಮನಪ್ಪ ಪುಜಾರಿ, ಗಿರಿಮಲ್ಲಪ್ಪ ಕಟ್ಟಿಮನಿ, ದತ್ತಾ ಖೈರೆ,ರಾಜೇಶ್ ಅಗ್ರವಾಲ, ಡಾ ಗೋವಿಂದ ನಾಯಕ, ಬಸವರಾಜ ಕಿರಣಗಿ, ನೀಲಸಿಂಗ ಚವ್ಹಾಣ, ರಮೇಶ ರಾಠೊಡ, ಮೋತಿ ರಾಠೊಡ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *