ಕುರಿ ವ್ಯಾಪಾರಿಗಳಿಂದ 4 ಲಕ್ಷ ಕುಸಿದುಕೊಂಡು ಪರಾರಿ: 21 ಪ್ರಕರಣದಲ್ಲಿದ್ದ 3 ಆರೋಪಿಗಳು ಅರೆಸ್ಟ್

ಜಿಲ್ಲೆ

ಯಾದಗಿರಿ: ಕುರಿ ವ್ಯಾಪಾರಿಗಳನ್ನು ಅಡ್ಡಗಟ್ಟಿ 4 ಲಕ್ಷ ರೂ ಕುಸಿದುಕೊಂಡು ಪರಾರಿಯಾಗಿದ್ದ ಡಕಾಯಿತರ ಗುಂಪಿನ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಯಲ್ಲಪ್ಪ ಕುಂಚಿಕೊರವರ್, ಕೃಷ್ಣ ಕುಂಚಿಕೊರವರ್, ಸಿದ್ದರಾಮಪ್ಪ ಕುಂಚಿಕೊರವರ್ ಎಂದು ಗುರುತಿಸಲಾಗಿದೆ, ಇನ್ನುಳಿದ 7 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.3 ರಂದು ಚಟ್ನಳ್ಳಿ ಕ್ರಾಸ್ ಬಳಿ ತೆಲಂಗಾಣದ ಸೂರ್ಯಪೇಟದಲ್ಲಿ ಕುರಿ ವ್ಯಾಪಾರಿಗಳನ್ನು ಅಡ್ಡಗಟ್ಟಿ ಹಲ್ಲೆ ಮಾಡಿ 4 ಲಕ್ಷ ಕುಸಿದುಕೊಂಡು ಪರಾರಿಯಾಗಿದ್ದರು. ಜೊತೆಗೆ ಈ ಡಕಾಯಿತರ ಗುಂಪು ರಾಜ್ಯದಾದ್ಯಂತ 21 ಪ್ರಕರಣಗಳಲ್ಲಿ ಭಾಗಿಯಾಗಿದೆ. 7 ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಮಾಹಿತಿ ನೀಡಿದರು.

ಆರೋಪಿಗಳ ಪತ್ತೆಗಾಗಿ ತಂಡ ರಚಿಸಲಾಗಿದ್ದು, ಈಗಾಗಲೇ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಬಾಗಲಕೋಟೆ, ಗದಗ, ರಾಯಚೂರು, ವಿಜಯನಗರ, ಕೊಪ್ಪಳ, ಬೆಳಗಾವಿ, ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಈ ಆರೋಪಿಗಳ ವಿರುದ್ಧ ಕಳ್ಳತನ, ಪೊಲೀಸರ ಮೇಲೆ ಹಲ್ಲೆ, ಡಕಾಯಿತಿ, ಮನೆಗಳ್ಳತನ, ವಾಹನ ಕಳ್ಳತನ ಹೀಗೆ 21 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

ಘಟನೆ ಏನು ?
ಜ.3ರಂದು ಬೆಳಗಿನ ಜಾವ 3:30ರ ಸುಮಾರಿಗೆ ಯಾದಗಿರಿ-ಶಹಾಪುರ ರಸ್ತೆಯ ಗುಂಡಳ್ಳಿ ದಾಟಿದ ನಂತರ ಚಟ್ನಳ್ಳಿ ಕ್ರಾಸ್ ಬಳಿ ನಾಗರಾಜ, ನವೀನ್ ಮತ್ತು ಸಾಯಿಕೃಷ್ಣ ಪಿಕಪ್ ವಾಹನದಲ್ಲಿ ಕುರಿಗಳನ್ನು ಶಹಾಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಡಕಾಯಿತರ ಗುಂಪು ಏಕಾಏಕಿ ವಾಹನ ಅಡ್ಡಗಟ್ಟಿ ನಿಲ್ಲಿಸಿ ಗಾಜಿನ ಬಾಟಲಿಗಳನ್ನು ಎಸೆದು ಹಲ್ಲೆ ಮಾಡಿದ್ದರು. ಜೊತೆಗೆ 4 ಲಕ್ಷ ರೂ. ಹಣವನ್ನು ಕುಸಿದುಕೊಂಡು ಹೋಗಿದ್ದರು.

Leave a Reply

Your email address will not be published. Required fields are marked *