ತಾಲೂಕು ಕೋಲಿ ಸಮಾಜ ಒಗ್ಗೂಡಿಸಿದ್ದು ಕಮಕನೂರ, ಒಡಕು ಮೂಡಿಸಿದ್ದು ಭೀಮಣ್ಣ ಸಾಲಿ

ಪಟ್ಟಣ

ಚಿತ್ತಾಪುರ: ಕೋಲಿ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಾಜವನ್ನು ಸಂಘಟಿಸಿ ಒಗ್ಗೂಡಿಸುವ ಕೆಲಸ ಕೋಲಿ ಗಂಗಾಮತ ಸಮಾಜದ ರಾಜ್ಯ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಎಂದು ಅಂಬಿಗರ ಚೌಡಯ್ಯ ನಿಗಮದ ಮಾಜಿ ನಿರ್ದೇಶಕ ಶರಣಪ್ಪ ನಾಟಿಕಾರ್ ಹಾಗೂ ತಾಲೂಕು ಕೋಲಿ ಸಮಾಜದ ಗೌರವಾಧ್ಯಕ್ಷ ಭೀಮಣ್ಣ ಸೀಬಾ ಹೇಳಿದರು. 

ಪಟ್ಟಣದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರದ ಹಿರಿಯ ಮುಖಂಡರೆನಿಸಿಕೊಂಡಿರುವ ಭೀಮಣ್ಣ ಸಾಲಿ ಅವರು ತಮ್ಮ ಸ್ವಾರ್ಥಕ್ಕಾಗಿ ಮತ್ತು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಮಾಜವನ್ನು ತಪ್ಪು ದಾರಿಗೆ ಎಳೆದು ಯುವಕರಲ್ಲಿ ಮಿಸ್ ಗೈಡ್ ಮಾಡಿ ಸಮಾಜದಲ್ಲಿ ವಿಷಬೀಜ ಬಿತ್ತಿ ಒಡಕ್ಕುಂಟು ಮಾಡಿ ಜಗಳ ಹಚ್ಚುವ ಕೆಲಸ ಮಾಡಿದ್ದಾರೆ ಎಂದರು. 

ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಅವರು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಹೀಗಾಗಿ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

ಕೋಲಿ ನಮಾಜದ ತಾಲೂಕು ಅಧ್ಯಕ್ಷ ಆಯ್ಕೆ ಮಾಡುವಲ್ಲಿ ಮೊದಲಿಂದಲು ಜನರ ಸಹಮತದ ಮೇರೆಗೆ ಅಂತಿಮವಾಗಿ ತಿಪ್ಪಣ್ಣಪ್ಪ ಕಮಕನೂರ ಅವರ ಲೆಟರ್ ಪ್ಯಾಡ್ ಮೂಲಕ ಘೋಷಣೆ ಮಾಡಲಾಗುತ್ತದೆ. ಇದು ಎಲ್ಲರಿಗೂ ಗೊತ್ತಿದ್ದರು ವಿನಾಕಾರಣ ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುವ ಪ್ರಯತ್ನ ಮಾಡಬೇಡಿ. ತಿಪ್ಪಣ್ಣಪ್ಪ ಕಮಕನೂರ ಅವರ ಲೇಟರ್ ಪ್ಯಾಡ್ ನಲ್ಲಿಯೇ ಈ ಹಿಂದೆ ಅಧ್ಯಕ್ಷರಾದರು ಮೌನ ವಹಿಸಿರುವುದು ದುರಂತ. ನಾವು ಯಾರ ಲೇಟರ್ ಪ್ಯಾಡ್ ನಲ್ಲಿ ಅಧ್ಯಕ್ಷರಾಗಿದ್ದೆವೆ ಎಂಬುದು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೀಗಾಗಿ ಕಮಕನೂರ ಅವರು ತಮ್ಮ ಲೆಟರ್ ಪ್ಯಾಡ್ ನ್ನು ಸರಿಯಾಗಿಯೇ ಬಳಸಿದ್ದಾರೆ, ಭೀಮಣ್ಣ ಸಾಲಿ ಅವರು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ತಿಪ್ಪಣ್ಣಪ್ಪ ಕಮಕನೂರ ಅವರು ಕೋಲಿ ಸಮಾಜದ ರಾಜ್ಯ ಮಟ್ಟದ ಒಬ್ಬ ಪ್ರಭಾವಿ ನಾಯಕರಾಗಿದ್ದು ಈಗ ವಿಧಾನ ಪರಿಷತ್ ಸದಸ್ಯರಾಗಿ ಕೋಲಿ ಸಮಾಜದ ಧ್ವನಿಯಾಗಿದ್ದಾರೆ. ಇವರ ಬೆಳವಣಿಗೆ ಸಹಿಸಿಕೊಳ್ಳಕ್ಕಾಗದೆ ಹೊಟ್ಟೆ ಕಿಚ್ಚಿನಿಂದ ಭೀಮಣ್ಣ ಸಾಲಿ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಇದು ಇಲ್ಲಿಗೆ ನಿಲ್ಲಿಸಿ ಗೌರವ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಸಮಾಜದ ಜನರಿಂದಲೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು. 

ಕೋಲಿ ಸಮಾಜದ ತಾಲೂಕು ಅಧ್ಯಕ್ಷರ ಆಯ್ಕೆ ಮಾಡುವಲ್ಲಿ ಒಮ್ಮೆ ಅಧ್ಯಕ್ಷ ಅಂತ ಮಾಡುತ್ತಾರೆ. ಒಮ್ಮೆ ಕ್ಯಾನ್ಸಲ್ ಅಂತ ಹೇಳುತ್ತಾರೆ. ಒಮ್ಮೆ ದಿಗ್ಗಾಂವ ಭಾಗದಲ್ಲಿ ಬಹಳಷ್ಟು ಅಧ್ಯಕ್ಷರಾಗಿದ್ದಾರೆ. ದಂಡೋತಿ, ಗುಂಡಗುರ್ತಿ ಭಾಗದವರಿಗೆ ಅಧ್ಯಕ್ಷ ಮಾಡಲಾಗುತ್ತದೆ ಎಂತೆಲ್ಲ ಹೇಳಿ ಸಮಾಜದಲ್ಲಿ ಗೊಂದಲ ಮೂಡಿಸಿ ಅಶಾಂತಿ ವಾತಾವರಣ ನಿರ್ಮಿಸಿದ್ದಾರೆ. ಇವರೊಬ್ಬ ಅರೆಹುಚ್ಚರಂತೆ ನಡೆದುಕೊಳ್ಳುತ್ತಿದ್ದಾರೆ. ತಾಲೂಕಿನಲ್ಲಿ ಇಬ್ಬರು ಅಧ್ಯಕ್ಷರಾಗಲು ಭೀಮಣ್ಣ ಸಾಲಿ ಅವರೇ ಕಾರಣ ಆಗಿದ್ದಾರೆ. ಆದ್ದರಿಂದ ಸಮಾಜದ ಜನರು ಇಂತಹ  ಮಾತುಗಳಿಗೆ ಕಿವಿಗೊಡದೆ ಕೋಲಿ ಸಮಾಜದ ಅಧಿಕೃತ ತಾಲೂಕು ಅಧ್ಯಕ್ಷರಾದ ಶಿವಕುಮಾರ ಯಾಗಾಪೂರ ಅವರಿಗೆ ಬೆಂಬಲಿಸಬೇಕು. ಇವರ ನೇತೃತ್ವದಲ್ಲಿ ಜನವರಿ 21 ರಂದು ನಡೆಯಲಿರುವ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಯಶಸ್ವಿಗೆ ಸಹಕರಿಸಿ ಇವರ ಕೈ ಬಲಪಡಿಸಬೇಕು ಎಂದರು.  

 ತಾಲೂಕು ಕೋಲಿ ಸಮಾಜ ಅಧ್ಯಕ್ಷ ಶಿವುಕುಮಾರ ಯಾಗಾಪುರ, ಮುಖಂಡ ತಮ್ಮಣ್ಣ ಡಿಗ್ಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ಕೋಲಿ ಸಮಾಜದ ಮುಖಂಡರಾದ ಕಾಶಪ್ಪ ಡೋಣಗಾಂವ, ಸಾಬಣ್ಣ ಭರಾಟೆ, ಸಾಬಣ್ಣ ಡಿಗ್ಗಿ, ದಶರಥ ದೊಡ್ಮನಿ, ಸಂತೋಷ ನಾಟಿಕಾರ್ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *