ಚಿತ್ತಾಪುರ: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ವೃಂದಾವನ ಪುನರ್ ಪ್ರತಿಷ್ಟಾಪನೆ 11ನೇ ವರ್ಷದ ವರ್ಧಂತಿ ಮಹೋತ್ಸವವು ವಿಜೃಂಭಣೆಯಿಂದ ಆಚರಿಸಲಾಯಿತು.
ಮಂಗಳವಾರ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭೀಷೇಕ, ತುಳಸಿ ಅರ್ಚನೆ, ಅಲಂಕಾರ ಪೂಜೆ, ಗಜವಾಹನ ಉತ್ಸವ, ಪಲ್ಲಕಿ ಉತ್ಸವ, ತೋಟ್ಟಿಲು ಸೇವೆ, ಪ್ರವಚನ, ಹಸ್ತೋದಕ, ಮಹಾ ಮಂಗಳಾರುತಿ, ತೀರ್ಥ, ಅನ್ನದಾನ ಸೇವೆ, ಭಜನೆ ಕಾರ್ಯಕ್ರಮ ಜರುಗಿದವು.
ಅದ್ಧೂರಿಯಾಗಿ ರಾಯರ ರಥೋತ್ಸವ ಜರುಗಿತು.
ಮಳಖೇಡದ ಸುಧಾ ಪಂಡಿತ ವೆಂಕಣಚಾರ್ಯರು ಹಾಗೂ ಅರ್ಚಕರು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ಅಲಂಕಾರ ಮಾಡಿದರು. ವಾದಿರಾಜ ಉಪಾಧ್ಯಾಯ ಬಿಜಾಪುರ ಇವರಿಂದ ಭರತನಾಟ್ಯ ಜರುಗಿತು.
ಮಹಿಳಾ ಮಂಡಳದವರಿಂದ ಭಜನಾ ಕಾರ್ಯಕ್ರಮ ಹಾಗೂ ಗಜವಾಹನ ಉತ್ಸವ ಜರುಗಿತು. ವಿಶ್ವನಾಥ ಅಫಜಲಪುರಕರ್ ಹಾಗೂ ಸಂಗಡಿಗರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು. ಮಹಿಳೆಯರು ನೃತ್ಯ ಮಾಡಿ ಜನಮನ ಸೆಳೆದರು.
ಸುಧೀಂದ್ರ ಪಾಟೀಲ, ಸ್ವಪ್ನ ಪಾಟೀಲ ನೇತೃತ್ವದಲ್ಲಿ ಅನ್ನದಾನ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಗಿರೀಶ್ ಜಾನಿಬ, ಪ್ರಮುಖರಾದ ಹಣಮಂತರಾವ ಕೊಡದೂರ, ಪವನ ಜೋಶಿ, ಸಂಜೀವ ಕುಲಕರ್ಣಿ, ಗೋಪಾಲರಾವ ಅಫಜಲಪುರಕರ್, ಅಪ್ಪಾಸಾಹೇಬ್ ಬೊಮ್ಮನಹಳ್ಳಿ, ಆನಂದ ಕುಲಕರ್ಣಿ, ನರಹರಿ ಕುಲಕರ್ಣಿ, ರಾಜು ದೇಶಪಾಂಡೆ, ಸರಿತಾ ಪಾಟೀಲ, ಸುಂದರಬಾಯಿ ಕುಲಕರ್ಣಿ, ಶೃತಿ ಜಾನಿಬ, ಅನ್ನಪೂರ್ಣ ಪಾಟೀಲ, ರಾಧಾಬಾಯಿ ಬೊಮ್ನಳ್ಳಿಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.