ಚಿತ್ತಾಪುರ: ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು .
ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ ಸ್ವಾಮಿ ಮಿನಿ ಹಾಲ್ ನಲ್ಲಿ ರವಿವಾರ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಚೆನ್ನಯ್ಯ ವಸ್ತ್ರದ್, ಜಿಲ್ಲಾಧ್ಯಕ್ಷ ರಾಜೇಂದ್ರ ಪ್ರಸಾದ ಸಮ್ಮುಖದಲ್ಲಿ ತಾಲೂಕು ಗೌರವ ಅಧ್ಯಕ್ಷರಾಗಿ ಉದಯಕುಮಾರ ಎಚ್ ಸಾಗರ್, ತಾಲೂಕು ಅಧ್ಯಕ್ಷರಾಗಿ ಅಣ್ಣಾರಾಯ ವಿ ಇವಣಿ, ಉಪಾಧ್ಯಕ್ಷರಾಗಿ ನಾಗೇಶ ಎ ಹಲಗಿ, ಪ್ರಧಾನ ಕಾರ್ಯದರ್ಶಿಯಾಗಿ ಶಾಮಣ್ಣ ಡಿ ಮೇಧಾ, ಸಹ ಕಾರ್ಯದರ್ಶಿಯಾಗಿ ಚಂದ್ರಕಾಂತ ವಿ ಉಪ್ಪಿನ್, ಖಜಾಂಚಿಯಾಗಿ ಸಂಗಮೇಶ ಪಾಟೀಲ್ ಹಾಗೂ ಇತರೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜೇವರ್ಗಿ ಅಧ್ಯಕ್ಷ ವೀರೇಶ ಮಠ , ಸೂರ್ಯಕಾಂತ ಗಾರಂಪಳ್ಳಿ, ಮಹಾಲಕ್ಷ್ಮಿ ಸಿ.ಪಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.