ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಟ್ಟ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

ರಾಜ್ಯ

ಚಿಕ್ಕಮಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ಎನ್.ಆರ್ ಪುರ ತಾಲೂಕಿನ ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ.

ಜೀವಂತ ಆನೆಯನ್ನೂ ನಾಚಿಸುವಂತೆ ರೋಬೋಟಿಕ್ ಆನೆ ಇದೆ. ಈ ರೋಬೋಟಿಕ್ ಆನೆಯನ್ನು ರಂಭಾಪುರಿ ಶ್ರೀಗಳಾದ ವೀರ ಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿ ಮಠಕ್ಕೆ ಸ್ವಾಗತಿಸಿಕೊಂಡಿದ್ದಾರೆ. ಈ ರೋಬೋಟಿಕ್ ಆನೆ ಸದಾ ಮಠದ ಆವರಣದಲ್ಲೇ ಇದ್ದು, ಭಕ್ತರನ್ನು ಆಶೀರ್ವದಿಸಲಿದೆ. ಮಠದ ಆವರಣದಲ್ಲಿ ಇದಕ್ಕಾಗಿ ಕಟ್ಟಡ ನಿರ್ಮಿಸಲಾಗಿದೆ.

ಸದಾ ಕಣ್ಣು ಬಿಟ್ಟು, ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನು ಅಲುಗಾಡಿಸುತ್ತಿರುತ್ತದೆ. ಇದರಿಂದಾಗಿ ಆನೆಯನ್ನು ನೋಡಿದರೆ ಇದು ನಿಜವಾದ ಆನೆ ಇರಬಹುದಾ ಎಂದು ಒಂದು ಕ್ಷಣ ವಿಚಲಿತಗೊಳ್ಳವಂತಿದೆ.

ರೋಬೋಟಿಕ್ ಆನೆಯನ್ನು ತಂದಿರು ಸಿಬ್ಬಂದಿ, ಶಿಲ್ಪಾ ಶೆಟ್ಟಿಯವರು ಮಠಕ್ಕೆ ನಿಜವಾದ ಆನೆಯನ್ನೇ ಕೊಡುಗೆಯಾಗಿ ಕೊಡುವವರಿದ್ದರು. ಆದರೆ ಕಾನೂನಿನ ತೊಡಕಾಗಬಹುದು ಎಂದು ಕಾಡಿನ ಆನೆಯನ್ನು ಹೋಲುವ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ರಂಭಾಪುರಿ ಶ್ರೀಗಳು ಈ ರೋಬೋಟಿಕ್ ಆನೆಯನ್ನು ಉದ್ಘಾಟಿಸಿದ ಕೂಡಲೇ ಮಠಕ್ಕೆ ಬಂದಿದ್ದ ನೂರಾರು ಭಕ್ತರು ಆನೆಯ ಆಶೀರ್ವಾದ ಪಡೆದು, ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪಂಚಪೀಠಗಳಲ್ಲಿ ಬಾಳೆಹೊನ್ನೂರಿನ ಭದ್ರಾ ನದಿ ತಟದಲ್ಲಿರುವ ರಂಭಾಪುರಿ ಮಠ ಮೊದಲನೆಯದ್ದಾಗಿದೆ.

Leave a Reply

Your email address will not be published. Required fields are marked *