ನಾಲವಾರ: ಶ್ರಾವಣ ಸಂಭ್ರಮಕ್ಕೆ ವೈಭವದ ಚಾಲನೆ

ಸುದ್ದಿ ಸಂಗ್ರಹ ನಾಲವಾರ ಕಲ್ಯಾಣ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠ ಶ್ರಾವಣದ ಸಂಭ್ರಮದಲ್ಲಿ ಭಕ್ತರ ಆರಾಧ್ಯ ಪರಮಪೂಜ್ಯ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಇಷ್ಟಲಿಂಗ ಮಹಾ ಪಾದಪೂಜೆಯೊಂದಿಗೆ ಈ ಬಾರಿಯ ಶ್ರಾವಣ ವೈಭವಕ್ಕೆ ಎರಡನೇ ಗುರುವಾರ ಚಾಲನೆ ನೀಡಲಾಯಿತು. ಕೈಲಾಸ ಮಂಟಪದ ಸಿದ್ಧಸಿಂಹಾಸನದ ಮೇಲೆ ಪ್ರತಿದಿನ ಗುರುಪಾದ ಪೂಜೆಯ ಝೇಂಕಾರ, ಖ್ಯಾತ ಗಾಯಕರ ಭಕ್ತಿಗೀತೆ, ಮಂತ್ರಘೋಷ, ಇಷ್ಟಲಿಂಗದ ದಿವ್ಯ ದರ್ಶನದೊಂದಿಗೆ ಭಕ್ತರು ಗುರುಗಳ ಪಾದಕ್ಕೆ ನಮಿಸಿ ಕೃತಾರ್ಥರಾಗುತ್ತಿದ್ದಾರೆ. ಪ್ರತಿದಿನ ಮುಂಜಾನೆ ಕೋರಿಸಿದ್ಧೇಶ್ವರರ ಕರ್ತೃ […]

Continue Reading

ಕನ್ನಡಗಿಯ ಮಲ್ಲಿಕಾರ್ಜುನ ದೇವರ ಸಂಭ್ರಮದ ಪಲ್ಲಕ್ಕಿ ಉತ್ಸವ

ಸುದ್ದಿ ಸಂಗ್ರಹ ಕಾಳಗಿತಾಲೂಕಿನ ಹೇರೂರ (ಕೆ) ಬೆಣ್ಣೆತೊರಾ ಜಲಾಶಯ ದಡದ ಸುಕ್ಷೇತ್ರ ಕನ್ನಡಗಿಯ ಮಲ್ಲಿಕಾರ್ಜುನ ದೇವರ ಜಾತ್ರೆ ನಿಮಿತ್ತ ಪಲ್ಲಕ್ಕಿ ಉತ್ಸವ ಶ್ರಾವಣ ಮಾಸದ ಎರಡನೇ ಸೋಮವಾರ ಸಂಭ್ರಮ, ಸಡಗರದಿಂದ ಜರುಗಿತು. ‘ಮಲ್ಲಿಕಾರ್ಜುನ ಮಹಾರಾಜ ಕೀ ಜೈ’ ಎಂಬ ಘೋಷಣೆ ಮುಗಿಲು ಮುಟ್ಟಿತು. ಬೆಳೆಗ್ಗೆ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ವಿಶೇಷ ಪೂಜೆ ಮತ್ತು ಪುಷ್ಪಾಲಂಕಾರ ಮಾಡಲಾಯಿತು. ದೇವಾಲಯದ ಆವರಣದಲ್ಲಿ ವಿವಿಧ ಹೂಗಳಿಂದ ರಚಿತವಾದ ದೊಡ್ಡ ಪ್ರಮಾಣದ ರಂಗೋಲಿ ಚಿತ್ತಾರ ಆಕರ್ಷಿತವಾಗಿತ್ತು. ಅಲಂಕೃತಗೊಂಡ ಮಲ್ಲಿಕಾರ್ಜುನ ದೇವರ ಮೂರ್ತಿ ಒಳಗೊಂಡ […]

Continue Reading

8.43 ಕೋಟಿ ಹಗರಣ ಪ್ರಕರಣ: ಕಿಂಗ್‌ಪಿನ್ ಸಹೋದರನ ಬಂಧನ

ಸುದ್ದಿ ಸಂಗ್ರಹ ಕೊಪ್ಪಳನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಬರೋಬ್ಬರಿ 8.43 ಕೋಟಿ ರೂ ಹಗರಣ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಪ್ರಮುಖ ಆರೋಪಿ ರವೀಂದ್ರಕುಮಾರ್‌ನ ಸಹೋದರ ಅನಿಲಕುಮಾರ್‌ನನ್ನು ಬೆಂಗಳೂರಿನಲ್ಲಿ ಅತ್ಯಂತ ರೋಚಕವಾಗಿ ಬಂಧಿಸಿದ್ದಾರೆ. ನಿವೇಶನ ಕೊಡಿಸುವುದಾಗಿ ನಂಬಿಸಿ ಪ್ರಾಧಿಕಾರದ ಅಧಿಕೃತ ಬ್ಯಾಂಕ್ ಖಾತೆಯಿಂದಲೇ ಸುಮಾರು 40ಕ್ಕೂ ಹೆಚ್ಚು ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ವಂಚಿಸಲಾಗಿತ್ತು. ಈ ಪೈಕಿ ಅನಿಲಕುಮಾರ್ ಖಾತೆಗೆ ಐದಕ್ಕೂ ಹೆಚ್ಚು ಕಂತುಗಳಲ್ಲಿ 1 ಕೋಟಿಗೂ ಅಧಿಕ ಮೊತ್ತ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. […]

Continue Reading

ಯಾದಗಿರಿ: ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆ

ಸುದ್ದಿ ಸಂಗ್ರಹ ಯಾದಗಿರಿಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆಯಾಗಿರುವ ಘಟನೆ ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮದ ಹೊರಭಾಗದಲ್ಲಿ ನಡೆದಿದೆ. ರಂಗಯ್ಯ (21) ನಾಪತ್ತೆಯಾದ ಯುವಕ. ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಿ ಸ್ನೇಹಿತರ ಜೊತೆ ಸ್ನಾನಕ್ಕೆ ತೆರಳಿದಾಗ ದುರ್ಘಟನೆ ಸಂಭವಿಸಿದೆ. ನಾಲ್ಕು ಜನ ಸ್ನೇಹಿತರು ನದಿಗೆ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಕಾಲು ಜಾರಿ ಬಿದ್ದ ಮೂವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ನಾಪತ್ತೆಯಾದ ಇನ್ನೋರ್ವ ಯುವಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಯಾದಗಿರಿ ಗ್ರಾಮೀಣ ಪೊಲೀಸ್ […]

Continue Reading

ಮಂತ್ರಾಲಯ: ಆ.27ರಿಂದ ರಾಯರ 355ನೇ ಆರಾಧನಾ ಮಹೋತ್ಸವ

ಸುದ್ದಿ ಸಂಗ್ರಹ ರಾಯಚೂರುಆಗಸ್ಟ್ 27ರಿಂದ ಸೆಪ್ಟೆಂಬರ್ 2ರವರೆಗೆ 7 ದಿನಗಳ ಕಾಲ ಗುರು ರಾಯರ 355ನೇ ಆರಾಧನಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ ಎಂದು ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ. ಮಂತ್ರಾಲಯದಲ್ಲಿ ಮಾತನಾಡಿದ ಅವರು, ಆರಾಧನಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿವೆ ಎಂದರು. ಆಗಸ್ಟ್ 29, 30, 31ರಂದು ಪರಿಮಳ ತೀರ್ಥ ಪುಷ್ಕರಣಿಯಲ್ಲಿ ಮೂರು ದಿನ ರಾತ್ರಿ ವೇಳೆ ತೆಪ್ಪೋತ್ಸವ ನಡೆಯಲಿದೆ. ಆಗಸ್ಟ್ 29ರಂದು ರಾಯರ ಪೂರ್ವಾರಾಧನೆ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಪೂಜಾ […]

Continue Reading

ಮಂಗಳೂರಿನ ಅಶ್ಮಿತ್‌ಗೆ ʻಸರಿಗಮಪʼ ಲಿಟಲ್‌ ಚಾಂಪ್ಸ್‌ ಕಿರೀಟ: 20 ಲಕ್ಷ ಬಹುಮಾನ

ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ʻಸರಿಗಮಪ ಲಿಟಲ್‌ ಚಾಂಪ್ಸ್‌ʼ ಸೀಸನ್‌ ಅದ್ಧೂರಿಯಾಗಿ ತೆರೆ ಕಂಡಿದ್ದು, ಮಂಗಳೂರಿನ ಬಾಲಕ ಅಶ್ಮಿತ್‌ ಈ ಬಾರಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಸುದೀರ್ಘ ಸಂಗೀತ ಪ್ರಯಾಣದ ನಂತರ, ಅಂತಿಮ ಮಹಾಸಂಗ್ರಮದಲ್ಲಿ ತಮ್ಮ ನಾದಸುಧೆಯಿಂದ ಜಡ್ಜಸ್‌ ಮತ್ತು ವೀಕ್ಷಕರ ಮನಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಫಿನಾಲೆ ಕದನದಲ್ಲಿ ಜಯಭೇರಿ ಬಾರಿಸಿದ ಅಶ್ಮಿತ್‌ಗೆ ಆಕರ್ಷಕ ವಿನ್ನಿಂಗ್‌ ಟ್ರೋಫಿಯ ಜೊತೆಗೆ 20 ಲಕ್ಷ ರೂ ನಗದು ಬಹುಮಾನವನ್ನು ನೀಡಿಲಾಗಿದೆ. ಅಶ್ಮಿತ್‌ಗೆ ತೀವ್ರ ಪೈಪೋಟಿ ನೀಡಿದ ಮಂಗಳೂರಿನ ಮತ್ತೊಬ್ಬ […]

Continue Reading

ವಿದ್ಯುತ್ ಕಂಬಕ್ಕೆ ಪಿಕಪ್ ಡಿಕ್ಕಿ: 3 ಜನ ಕಾರ್ಮಿಕರ ಸಾವು, 15 ಜನರಿಗೆ ಗಾಯ

ಸುದ್ದಿ ಸಂಗ್ರಹ ಯಾದಗಿರಿವಿದ್ಯುತ್ ಕಂಬಕ್ಕೆ ಬುಲೆರೋ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ 3 ಜನ ಕಾರ್ಮಿಕರು ಸಾವನ್ನಪ್ಪಿದ್ದು, 15 ಜನ ಗಾಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಡ್ನಾಳ್ ಗ್ರಾಮದ ಬಳಿ ನಡೆದಿದೆ. ಭಾಗ್ಯಶ್ರೀ (35), ಸತ್ಯಮ್ಮ (30), ಹೊನ್ನಿಂಗಮ್ಮ (18) ಮೃತ ಕಾರ್ಮಿಕರು. ಚಾಲಕನ ನಿಯಂತ್ರಣ ತಪ್ಪಿ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮೂವರು ಕಾರ್ಮಿಕರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರನ್ನು ಶಹಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. […]

Continue Reading

40 ಕಿ.ಮೀ ಚೇಸಿಂಗ್​​​: ಪ್ರಾಣ ಪಣಕ್ಕಿಟ್ಟು ಅಂತಾರಾಜ್ಯ ದನಗಳ್ಳರ​​ ಹೆಡೆಮುರಿ ಕಟ್ಟಿದ ಯಾದಗಿರಿ ಪೊಲೀಸರು

ಸುದ್ದಿ ಸಂಗ್ರಹ ಯಾದಗಿರಿಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ರೈತರ ನಿದ್ದೆಗೆಡಿಸಿದ್ದ ಅಂತಾರಾಜ್ಯ ದನಗಳ್ಳರ ಖತರ್ನಾಕ್ ಗ್ಯಾಂಗ್​​ನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ . ದನಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳರನ್ನು ಬರೋಬ್ಬರಿ 40 ಕಿ.ಮೀ ಬೆನ್ನಟ್ಟಿ ಖೆಡ್ಡಾ ತೋಡುವಲ್ಲಿ ಯಾದಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಡೆದಿದ್ದೇನು ?ಕಳೆದ ಎರಡು ವರ್ಷಗಳಿಂದ ವಡಗೇರ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಈ ಗ್ಯಾಂಗ್ ನಿರಂತರವಾಗಿ ಕೈಚಳಕ ತೋರುತ್ತಿತ್ತು. ಮನೆಗಳ ಮುಂದೆ ಹಾಗೂ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ರಾಸುಗಳಿಗೆ ಅರವಳಿಕೆ (ನಿದ್ದೆ ಬರುವ) ಇಂಜೆಕ್ಷನ್ […]

Continue Reading

ಬಿಜೆಪಿಗೆ ದೇಶದ ವಿಭಜಿಸುವ ಹುನ್ನಾರ: ವಂದೇ ಮಾತರಂ ವಿವಾದಕ್ಕೆ ಯತಿಂದ್ರ ಟೀಕೆ

ಸುದ್ದಿ ಸಂಗ್ರಹ ಕಲಬುರಗಿವಂದೇ ಮಾತರಂ ಹೆಸರಿನಲ್ಲಿ ಬಿಜೆಪಿಯವರು ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಲು ಬಯಸುತ್ತಿದ್ದಾರೆ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು. ನಗರದ ಐವಾನ್‌–ಎ–ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ಸಭೆಗಳಲ್ಲಿ ವಂದೇ ಮಾತರಂ ಅನ್ನು ಅಳವಡಿಸಿಕೊಂಡ ಮೊಟ್ಟ ಮೊದಲ ಪಕ್ಷ ಕಾಂಗ್ರೆಸ್‌. ವಂದೇ ಮಾತರಂ ರಾಷ್ಟ್ರೀಯ ಗೀತೆ ಮಾಡಿದ್ದು ಕೂಡ ಕಾಂಗ್ರೆಸ್‌ ಪಕ್ಷ. 1950ರಲ್ಲಿ ಈ ತೀರ್ಮಾನವಾಗಿತ್ತು. ಆಗ ವಂದೇ ಮಾತರಂನ ಎರಡು ಚರಣಗಳನ್ನಷ್ಟೆ ರಾಷ್ಟ್ರೀಯ ಗೀತೆಯಾಗಿ ಪರಿಗಣಿಸಲು ನಿರ್ಧರಿಸಲಾಗಿತ್ತು. ನಮ್ಮ […]

Continue Reading

ಹೊಸ ಸಿಮ್ ಪಡೆಯಲು ಇನ್ನುಮುಂದೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ

ಸುದ್ದಿ ಸಂಗ್ರಹ ನವದೆಹಲಿಹೊಸ ಸಿಮ್ ಕಾರ್ಡ್ ಪಡೆಯಲು ಇನ್ನುಮುಂದೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಕೇಂದ್ರದ ಆದೇಶದ ಹಿನ್ನೆಲೆ ಹೊಸ ಸಿಮ್ ಕಾರ್ಡ್‌ ಪಡೆಯುವ ಮುನ್ನ ಗ್ರಾಹಕರು ಬಯೋಮೆಟ್ರಿಕ್ ಪರಿಶೀಲಿಸಬೇಕು. ಗ್ರಾಹಕರ ಮಾಹಿತಿ ಅಪ್‌ಡೇಟ್ ಮತ್ತು ಮರುಪರಿಶೀಲನೆ ಸಂದರ್ಭದಲ್ಲೂ ಬಯೋಮೆಟ್ರಿಕ್ ವೆರಿಫಿಕೇಶನ್ ಅಗತ್ಯ ಎಂದು ಸೂಚಿಸಿದೆ. ಸಿಮ್ ಕಾರ್ಡ್‌ ಸ್ಥಗಿತಗೊಳಿಸುವ ಪ್ರಕ್ರಿಯೆಯಲ್ಲೂ ಗುರುತು ಪರಿಶೀಲನೆ ನಿಯಮ ಅನ್ವಯವಾಗಲಿದೆ. ಸೈಬರ್ ವಂಚನೆ ಹಾಗೂ ನಕಲಿ ಸಿಮ್ ಕಾರ್ಡ್ ಕನೆಕ್ಷನ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ಈ ಕ್ರಮ […]

Continue Reading