ಮಕ್ಕಳ ಭವಿಷ್ಯ ನಿರ್ಮಿಸುವ ಶಿಲ್ಪಿ ತಂದೆ: ಎಚ್.ಬಿ ಪಾಟೀಲ
ಕಲಬುರಗಿ: ತಂದೆಯ ತ್ಯಾಗ, ಪ್ರೀತಿ, ಪ್ರೇಮ ಮರೆಯಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತನ್ನತನವನ್ನು ತೊರೆದು, ಎಲ್ಲವೂ ಮಕ್ಕಳಿಗಾಗಿ ದಾರೆಯೆರೆಯುವ ಮೂಲಕ ಮಕ್ಕಳ ಭವಿಷ್ಯವನ್ನು ನಿರ್ಮಿಸುವ ಶಿಲ್ಪಿ ತಂದೆಯಾಗಿದ್ದಾನೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಆಯೋಜಿಸಲಾಗಿದ್ದ ‘ವಿಶ್ವ ಅಪ್ಪಂದಿರ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಇಡಿ ಜೀವನದುದ್ದಕ್ಕೂ ಕುಟುಂಬದ ಲೇಸನ್ನು ಬಯಸುವ ಕೌಟುಂಬಿಕ ವ್ಯವಸ್ಥೆಯ ಸಫಲತೆಯಲ್ಲಿ ತಂದೆಯ ಪಾತ್ರ ಅನನ್ಯವಾಗಿದೆ ಎಂದರು. […]
Continue Reading