ನಗ್ನ ಫೋಟೋ ಕಳಿಸುವಂತೆ ಕಿರುಕುಳ ಆರೋಪ, ಪಿಎಸ್ಐ ವಿರುದ್ಧ ಕಮಿಷನರ್‌ಗೆ ದೂರು ನೀಡಿದ ವೈದ್ಯೆ

ಬೆಂಗಳೂರು: ಯುವ ವೈದ್ಯೆಗೆ ನಗ್ನ ಫೋಟೋ ಕಳುಹಿಸುವಂತೆ ಕಿರುಕುಳ ನೀಡಿರುವದಲ್ಲದೆ, ನಿರಾಕರಣೆ ಮಾಡಿದ್ದಕ್ಕೆ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಗಂಭೀರ ಆರೋಪ ಪಿಎಸ್ಐ ವಿರುದ್ಧ ಕೇಳಿ ಬಂದಿದೆ. ಬಸವನಗುಡಿ ಪೊಲೀಸ್ ಠಾಣೆ ಪಿಎಸ್ಐ ರಾಜಕುಮಾರ ಎಸ್ ಜೋಡಟ್ಟಿ ವಿರುದ್ದ ಖಾಸಗಿ ಆಸ್ಪತ್ರೆ ವೈದ್ಯೆಯೊಬ್ಬರು ದೂರು ನೀಡಿದ್ದಾರೆ, ತನಗೆ ನ್ಯಾಯ ಕೊಡಿಸುವಂತೆ ಪೊಲೀಸ್ ಕಮಿಷನರ್ ಬಿ ದಯಾನಂದ ಅವರಿಗೆ ನೊಂದ ವೈದ್ಯೆ ಮನವಿ ಮಾಡಿದ್ದಾರೆ. ಘಟನೆಯ ವಿವರ: ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಸಂತ್ರಸ್ತ ಯುವತಿ ಬಸವನಗುಡಿ […]

Continue Reading

ಡಾ.ತ್ರಿಮೂರ್ತಿ ಶಿವಾಚಾರ್ಯರ ಪಾದಯಾತ್ರೆ: ಮಠದ ಪಹಣಿಯಿಂದ ವಕ್ಫ್ ಹೆಸರು ಡಿಲೀಟ್

ಕಲಬುರಗಿ: ಸೇಡಂ ತಾಲೂಕಿನ ತೊಟ್ನಳ್ಳಿ ಗ್ರಾಮದ ಮಹಾಂತೇಶ್ವರ ಮಠದ ಜಮೀನು ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ನಮೂದಾಗಿರುವದನ್ನು ವಿರೋಧಿಸಿ ಡಾ. ತ್ರಿಮೂರ್ತಿ ಶಿವಾಚಾರ್ಯರು ಬುಧವಾರ ಪಾದಯಾತ್ರೆ ಆರಂಭಿಸುವ ಮುನ್ನವೇ ಪಹಣಿಯಲ್ಲಿನ ವಕ್ಫ್ ಹೆಸರು ತೆಗೆದು ಹಾಕಲಾಗಿದೆ. ಮಠದ ಡಾ. ತ್ರಿಮೂರ್ತಿ ಶಿವಾಚಾರ್ಯರ ಹೆಸರಿನಲ್ಲಿ 5.24 ಎಕರೆ ಜಮೀನು ಇದೆ. 2018ರಲ್ಲಿ ಮಠದ ಪಹಣಿಯಲ್ಲಿ ಅಶೂರಖಾನಾ ವಕ್ಸ್ ಎಂದು ಸೇರ್ಪಡೆಯಾಗಿತ್ತು. ಇದರ ವಿರುದ್ಧ ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದರು. ಬುಧವಾರ ಬೆಳಿಗ್ಗೆ ಡಾ. ತ್ರಿಮೂರ್ತಿ […]

Continue Reading