ಸುದ್ದಿ ಸಂಗ್ರಹ ಕಲಬುರಗಿ
ನಗರದ ರಾಮನಗರ ಪ್ರದೇಶದಲ್ಲಿ ಮನೆಯೊಂದರ ಕೀಲಿ ಒಡೆದ ಕಳ್ಳರು, 110 ಗ್ರಾಂ ಚಿನ್ನಾಭರಣ ಮತ್ತು 6.50 ಲಕ್ಷ ನಗದು ಸೇರಿದಂತೆ ಒಟ್ಟು 17.50 ಲಕ್ಷ ಮೌಲ್ಯ ಸ್ವತ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಎಕ್ಸಿಸ್ ಬ್ಯಾಂಕ್‌ನಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿರುವ ದರ್ಶನ ಕಾಂಬಳೆ ಚಿನ್ನಾಭರಣ, ಹಣ ಕಳೆದುಕೊಂಡವರು.
ನ.5ರಂದು ನಮ್ಮ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. 9ನೇ ದಿನವಾದ ನ.14ರಂದು ಶೋಕದ ಕಾರ್ಯಕ್ರಮ ಮುಗಿಸಿದೆವು.
ಅದೆ ದಿನ ಮನೆಗೆ ಕೀಲಿ ಹಾಕಿಕೊಂಡು ಕುಟುಂಬ ಸಮೇತ ನಾವು ದೇವಲಗಾಣಗಾಪುರಕ್ಕೆ ಹೋಗಿದ್ದೆವು. ಮರು ದಿನ ನ.15ರಂದು ಬೆಳಿಗ್ಗೆ 8.45ಕ್ಕೆ ಮನೆಗೆ ಬಂದು ನೋಡುವಷ್ಟರಲ್ಲಿ ಕಳವು ನಡೆದಿತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದರ್ಶನ್ ಕಾಂಬಳೆ ವಿವರಿಸಿದ್ದಾರೆ.
ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.