ಸುದ್ದಿ ಸಂಗ್ರಹ ಶಹಾಬಾದ್
ಶಹಾಬಾದ್ ಮಾರ್ಗವಾಗಿ ಸಂಚರಿಸುವ ಚಿತ್ತಾಪುರ, ಕಲಬುರಗಿ, ಯಾದಗಿರಿ ಮತ್ತು ರಾಯಚೂರಿಗೆ ತೆರಳುವ ಬಸ್‌ಗಳನ್ನು ಶಹಾಬಾದ್ ವಾಡಿ ಕ್ರಾಸ್ ಬಳಿ ನಿಲುಗಡೆ ಮಾಡಲು ಆಗ್ರಹಿಸಿ ಜುಲೈ 13 ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಯಾದಗಿರಿ-ಕಲಬುರಗಿ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಸ್ಥಳೀಯ ಸಮಿತಿ ಸದಸ್ಯ ಜಗನ್ನಾಥ ಎಸ್.ಎಚ್ ತಿಳಿಸಿದ್ದಾರೆ.
ಹಲವು ಬಾರಿ ಕೆಎಸ್‌ಆರ್‌ಟಿಸಿ ಜಿಲ್ಲಾ ನಿಯಂತ್ರಣ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ವರ್ಷ ಕಳೆದರೂ ಕೂಡ ಇದುವರೆಗೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಶಹಾಬಾದ್ ಕ್ರಾಸ್ ಬಳಿ ಬಸ್ ನಿಲ್ಲಿಸಲು ಬಸ್ ಚಾಲಕರಿಗೆ ಹೇಳಿದ್ದೆವೆ ಮತ್ತು ಸಾರಿಗೆ ಇಲಾಖೆಯಿಂದ ಸಂಚಾರಿ ನಿಯಂತ್ರಣ ಘಟಕ ಸ್ಥಾಪಿಸಿ ಸಿಬ್ಬಂದಿ ನೇಮಿಸಿದ್ದೆವೆ ಎಂದು ಆದೇಶ ಪತ್ರ ತೋರಿಸುತ್ತಿದ್ದಾರೆ, ಆದರೆ ಬಸ್‌ಗಳ ನಿಲುಗಡೆ ಮಾಡುತ್ತಿಲ್ಲ. ಹೀಗಾಗಿ ರಸ್ತೆ ತಡೆ ಚಳವಳಿ ಅನಿವಾರ್ಯವಾಗಿದೆ ಎಂದು ಎಚ್ಚರಿಸಿದ್ದಾರೆ.