ಛತ್ತೀಸ್‌ಗಢದಲ್ಲಿ ಎಬೋಲಾ ಭೀತಿ: ಮೂವರು ಆಫ್ರಿಕಾ ಪ್ರಜೆಗಳಿಗೆ 21 ದಿನ ಕ್ವಾರಂಟೈನ್

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ರಾಯ್ಪುರ
ಇತ್ತೀಚಿಗೆ ಆಫ್ರಿಕಾದ ಹಲವೆಡೆ ಎಬೋಲಾ ವೈರಸ್ ಭೀತಿ ಹಬ್ಬಿಕೊಂಡಿತ್ತು. ಇದರ ನಡುವೆ ಇದೀಗ ಛತ್ತೀಸ್‌ಗಢದಲ್ಲಿ ಮೂವರು ಆಫ್ರಿಕಾ ಪ್ರಜೆಗಳನ್ನು 21 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಸಚಿವ ಶ್ಯಾಮ್ ಬಿಹಾರಿ ಜೈಸ್ವಾಲ್ ಮಾತನಾಡಿ, ಸದ್ಯ ಆಫ್ರಿಕಾದ ಮೂವರು ಪ್ರಜೆಗಳನ್ನು ದುರ್ಗ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಆವರ ಆರೋಗ್ಯ ಸ್ಥಿತಿಗತಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಈವರೆಗೂ ಎಬೋಲಾ ವೈರಸ್ ಇರುವುದು ದೃಢಪಟ್ಟಿಲ್ಲ ಹಾಗೂ ಯಾವುದೆ ರೀತಿಯ ರೋಗದ ಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ಎಬೋಲಾ ಶಂಕಿತರಿಗೆ ಚಿಕಿತ್ಸೆ, ಕ್ವಾರಂಟೈನ್ ಹಾಗೂ ಆಸ್ಪತ್ರೆಯಲ್ಲಿ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸಂಪೂರ್ಣವಾಗಿ ಸಿದ್ಧವಾಗಿದೆ. ಸಾರ್ವಜನಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳು ಜಾರಿಯಲ್ಲಿವೆ. ಈ ಸಂಬಂಧ ರಾಜ್ಯದಲ್ಲಿ ಸಹಾಯವಾಣಿ ಸಂಖ್ಯೆಯನ್ನು ಜಾರಿಗೊಳಿಸಲಾಗಿದೆ ಎಂದಿದ್ದಾರೆ.

ಇದಕ್ಕೂ ಮುನ್ನ ಉಗಾಂಡಾದ ಇಬ್ಬರು ಮಹಿಳೆಯರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬಂದಿತ್ತು.

Leave a Reply

Your email address will not be published. Required fields are marked *