ನೂತನ ಸಚಿವರಿಗೆ ಖಾತೆ ಹಂಚಿಕೆ ಫೈನಲ್‌ ಆಗಿದೆ: ಸಿಎಂ ಡಿಕೆಶಿ

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ನೂತನ ಸಚಿವರಿಗೆ ಖಾತೆ ಹಂಚಿಕೆ ಆಗಿದ್ದು, ಪಟ್ಟಿಯನ್ನು ಹೈಕಮಾಂಡ್‌ಗೆ ಕಳಿಸಿದ್ದೆವೆ. ಶೀಘ್ರವೇ ಪಟ್ಟಿ ಬಿಡುಗಡೆ ಆಗಲಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಿಳಿಸಿದರು.

ಇಂದು ಸಂಜೆ ವಿಧಾನಸೌಧಕ್ಕೆ ತೆರಳಿದ್ದ ಸಿಎಂ ಹಲವು ಗಣ್ಯಾತಿಗಣ್ಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ವಿಧಾನಸೌಧದಲ್ಲಿರೊ ಭುವನೇಶ್ವರಿ ತಾಯಿ, ದಿ. ದೇವರಾಜ ಅರಸ್, ಕೆ.ಸಿ ರೆಡ್ಡಿಯವರ, ಎಸ್‌. ನಿಜಲಿಂಗಪ್ಪ, ಡಾ. ಬಾಬು ಜಗಜೀವನ್ ರಾಂ, ಕೆಂಗಲ್ ಹನುಮಂತಯ್ಯ, ಲಾಲ್ ಬಹುದ್ದೂರ್ ಶಾಸ್ತ್ರಿ ಮತ್ತು ಸುಭಾಶ್ಚಂದ್ರಭೋಸ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ವಂದಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಎಲ್ಲರಿಗೂ ಖಾತೆ ಹಂಚಿಕೆ ಫೈನಲ್ ಆಗಿದ್ದು, ಪಟ್ಟಿಯನ್ನ ಹೈಕಮಾಂಡ್‌ಗೆ ಕಳಿಸಿದ್ದೆವೆ. ಶೀಘ್ರದಲ್ಲೆ ಖಾತೆ ಹಂಚಿಕೆ ಪಟ್ಟಿ ಬಿಡುಗಡೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಮಾತನಾಡಿ, ರಾಜ್ಯಕ್ಕೆ ಸೇವೆ ಮಾಡಿದ ನಾಡಿನ ಹಿರಿಯರಿಗೆ, ತಾಯಿ ಭುವನೇಶ್ವರಿಗೆ ಸ್ಮರಿಸೋದು ನನ್ನ ಕರ್ತವ್ಯ. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಅವರಂತಹ ಮೇರು ವ್ಯಕ್ತಿತ್ವಗಳಿಗೆ ಗೌರವ ಸಲ್ಲಬೇಕು. ನಾಳೆ ಮಿಕ್ಕ ಮಾಜಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡ್ತೆನೆ. ಕುಮಾರಸ್ವಾಮಿ, ಸದಾನಂದ ಗೌಡ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡ್ತೆನೆ. ಕುಮಾರಸ್ವಾಮಿ ಅವ್ರು ಬಂದಮೇಲೆ ಅವರನ್ನೂ ಭೇಟಿ ಮಾಡ್ತಿನಿ. ಅವರ ಆಡಳಿತದ ಅನುಭವ, ಸಲಹೆ ಪಡೆಯೋದು ನನಗೆ ಮುಖ್ಯ ಎಂದರು.

ರಾಜ್ಯಸಭೆಗೆ ನಾಳೆ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ ಮಾಡ್ತಾರೆ. ಅವರೊಂದಿಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮಾತ್ತು ನಾನು ಎಲ್ಲರೂ ಇರ್ತೀವಿ. ರಾಜ್ಯಸಭೆಗೆ 5 ಅಭ್ಯರ್ಥಿಗಳನ್ನು ನಾವು ಹಾಕ್ತೀವಿ. ಜೆಡಿಎಸ್ ನವರು ಹಾಕ್ತಾರೋ ಬಿಡ್ತಾರೋ ನಾವು 5 ಅಭ್ಯರ್ಥಿ ಹಾಕ್ತೀವಿ. ನಂಬರ್ ಎಷ್ಟಿದೆ ಎಲ್ಲಾ ನೋಡಿಕೊಂಡೇ ಈ ತೀರ್ಮಾನ ಮಾಡಿದ್ದೀವಿ ಎಂದು ಹೇಳಿದರು.

Leave a Reply

Your email address will not be published. Required fields are marked *