ಅಂಚೆ ಮತ ಮರು ಎಣಿಕೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗೆ ECI ಪ್ರಮಾಣ ಪತ್ರ

ಜಿಲ್ಲೆ

ಸುದ್ದಿ ಸಂಗ್ರಹ ಚಿಕ್ಕಮಗಳೂರು
ಶೃಂಗೇರಿ ಅಂಚೆ ಮತ ಮರು ಎಣಿಕೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಡಿ.ಎನ್‌ ಜೀವರಾಜ್ ಅವರಿಗೆ ಚುನಾವಣಾ ಅಧಿಕಾರಿ ಗೌರವಕುಮಾರ್ ಶೆಟ್ಟಿ ಪ್ರಮಾಣ ಪತ್ರ ನೀಡಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ನನ್ನನ್ನು ಗೆಲ್ಲಿಸಿದ್ದರು. ಆದರೆ ಇಲ್ಲಿಯ ಕೆಲವರು ಸೋಲಿಸಿದ್ದರು. ಕಾನೂನಿನ ಹೋರಾಟದ ಮೂಲಕ ನನಗೆ ಜಯಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವೋಟ್ ಟ್ಯಾಂಪರಿಂಗ್ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಅವರು, ಟ್ಯಾಂಪರಿಂಗ್ ಆರೋಪದಡಿ ತಮ್ಮ ವಿರುದ್ಧ ದಾಖಲಾದ ಪ್ರಕರಣ ಠಾಣಾ ವ್ಯಾಪ್ತಿಗೆ ಬರುವುದಿಲ್ಲ. ಆಯೋಗ ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್‌ನವರೆ ಮಾಡಿದ್ದಾರೆ. ಇವರ ಸರ್ಕಾರದಲ್ಲೆ ಇದ್ದ ಮತಗಳು ಟ್ಯಾಂಪರಿಂಗ್ ಆಗೋಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

2023ರ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ 692 ಅಂಚೆ ಮತ, ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ 569 ಅಂಚೆ ಮತ ಬಿದ್ದಿತ್ತು. ಈಗ ನಡೆದ ಮರು ಎಣಿಕೆಯಲ್ಲಿ‌ ಜೀವರಾಜ್ 690 ಮತ (2 ಮತ ಕಡಿಮೆ) ರಾಜೇಗೌಡ 314 ಮತ (251 ಮತ ಕಡಿಮೆ) ಪಡೆದಿದ್ದಾರೆ. ರಾಜೇಗೌಡರಿಗೆ ಬಿದ್ದ 318 ಮತಗಳು ಮರು ಎಣಿಕೆಯಲ್ಲಿ ಅಸಿಂಧು ಎಂದು ಘೋಷಿಸಲಾಗಿದೆ. ಈ ಮೂಲಕ ಅಂಚೆ ಮತಗಳ ಮರು ಎಣಿಕೆಯಲ್ಲಿ 52 ಮತಗಳಿಂದ ಬಿಜೆಪಿ ಅಭ್ಯರ್ಥಿ ಜೀವರಾಜ್ ಮೇಲುಗೈ ಸಾಧಿಸಿದ್ದಾರೆ.

Leave a Reply

Your email address will not be published. Required fields are marked *