ವಾಡಿ: ಬಿಜೆಪಿ ಕಚೇರಿಯಲ್ಲಿ ಭಗವಾನ್ ಬುದ್ಧ ಜಯಂತಿ ಆಚರಣೆ

ಪಟ್ಟಣದ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುದ್ಧ ಪೂರ್ಣಿಮೆಯ ಪ್ರಯುಕ್ತ ಭಗವಾನ್ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಬುದ್ಧನ ಉನ್ನತ ಆದರ್ಶಗಳು, ಅಹಿಂಸಾ ತತ್ವ, ಸಾಮರಸ್ಯದ ಸಂದೇಶಗಳು ನೆಮ್ಮದಿ ಜೀವನಕ್ಕೆ ನಾಂದಿ ಎಂದರು.

ಅವರ ಮಾನವೀಯತೆಯ ಸಂಕೇತಗಳು ಇಡಿ ವಿಶ್ವಕ್ಕೆ ಅನ್ವಯವಾಗಿವೆ. ಅವರ ಜೀವನ ಸಮಾನತೆ, ಪ್ರೀತಿ, ದಯೆ, ಸಹಿಷ್ಣುತೆಯ ಪ್ರತೀಕವಾಗಿದೆ. ಸೌಹಾರ್ದ, ಸಹಾನುಭೂತಿಯಿಂದ ಸಮಾಜಕ್ಕಾಗಿ ಸೇವೆ ಮಾಡುವ ಸ್ಫೂರ್ತಿ ನಮಗೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್.ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ, ಮುಖಂಡರಾದ ಶರಣಗೌಡ ಚಾಮನೂರ, ಭೀಮರಾವ ದೊರೆ, ಆನಂದ ಇಂಗಳಗಿ, ಅಶೋಕ ಪಂಚಾಳ, ಮಲ್ಲಿಕಾರ್ಜುನ ಯಾದಗಿರ, ಬಸವರಾಜ ಹಲಕರ್ಟಿ, ಬಾಬು ಗುತ್ತೆದಾರ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *