ಸುದ್ದಿ ಸಂಗ್ರಹ ವಾಡಿ
ಹಳೆ ದ್ವೇಷದ ಕಾರಣಕ್ಕೆ ಏ.20ರಂದು ವಾಡಿ ಪಟ್ಟಣದಲ್ಲಿ ನಡೆದ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸೋಮವಾರ ತಾಲೂಕಿನಾದ್ಯಂತ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಚಿತ್ತಾಪುರ ತಾಲೂಕಿನ ವಿವಿದೆಡೆ ಪೊಲೀಸರು ರಾತ್ರಿ ಸಮಯದಲ್ಲಿ 50ಕ್ಕೂ ಹೆಚ್ಚು ರೌಡಿಶೀಟರ್ ಮನೆಗಳನ್ನು ಜಾಲಾಡಿದ್ದಾರೆ. ಸಿಪಿಐ ಸಿದ್ದಬಸವನಗೌಡ ಪಾಟೀಲ, ಪಿಎಸ್ಐ ತಿರುಮಲೇಶ ಕೆ, ಮಂಜುನಾಥರೆಡ್ಡಿ, ರೇಣುಕಾ ಉಡಗಿ ಸಹಿತ ಚಿತ್ತಾಪುರ ವಾಡಿ, ಶಹಾಬಾದ, ಕಾಳಗಿ ಪೊಲೀಸ್ ಸಿಬ್ಬಂದಿಗಳು ದಾಳಿ ವೇಳೆ ಇದ್ದರು.