ದೇಶದ ರಕ್ಷಣೆಯಲ್ಲಿ ಸಿಆರ್‌ಪಿಎಫ್ ಕೊಡುಗೆ ಅನನ್ಯ‌

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಕೇಂದ್ರೀಯ ಮೀಸಲು ಪೊಲೀಸ್ ಪಡೆಯು ದೇಶದ ಪ್ರಮುಖ ಆಂತರಿಕ ಭದ್ರತಾ ಪಡೆಯಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದು, ದಂಗೆ ಅಥವಾ ಭಯೋತ್ಪಾದನೆ ನಿಗ್ರಹ, ನಕ್ಸಲ್ ವಿರೋಧಿ ಕಾರ್ಯಾಚರಣೆ ಮತ್ತು ಚುನಾವಣೆ ಸಂದರ್ಭದಲ್ಲಿ ಭದ್ರತೆ ಒದಗಿಸುವ ಮೂಲಕ ದೇಶದ ರಕ್ಷಣೆಯಲ್ಲಿ ಅನನ್ಯವಾದ ಪಾತ್ರ ವಹಿಸಿದೆ ಎಂದು ಸಿಆರ್‌ಪಿಎಫ್ ಮಾಜಿ ಮುಖ್ಯ ಪೇದೆ ಚಂದ್ರಕಾಂತ ಭದ್ರಪೆ ಹೇಳಿದರು.

ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಜರುಗಿದ “ಸಿಆರ್‌ಪಿಎಫ್ ಶೌರ್ಯ ದಿನಾಚರಣೆ”ಯಲ್ಲಿ ಮಾತನಾಡಿದ ಅವರು, ಗೃಹ ಸಚಿವಾಲಯದ ಅಡಿಯಲ್ಲಿ ರಾಜ್ಯ ಪೊಲೀಸ್ ಪಡೆಗಳಿಗೆ ಸಹಾಯ ಮಾಡುತ್ತದೆ. ನಾನು ಪ್ರಧಾನಿಗಳಾದ ಡಾ.ಮನಮೋಹನ ಸಿಂಗ್ ಮತ್ತು ನರೇಂದ್ರ ಮೋದಿಯವರ ವಿಶೇಷ ರಕ್ಷಣಾ ಗುಂಪು(ಎಸ್ ಪಿಜಿ)ಯಲ್ಲಿ ಸೇವೆ ಸಲ್ಲಿಸಿದ್ದೆನೆ ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ, ಬಳಗದ ಸದಸ್ಯರಾದ ಡಾ.ರಾಜಶೇಖರ ಪಾಟೀಲ್, ಮಹಾಂತೇಶ್ ಬಿರಾದಾರ, ದಿನೇಶ ಮಿಶ್ರಾ, ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ ಮತ್ತು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *