ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾರತದ ಮಾಜಿ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಿಸಲಾಯಿತು.
ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ಸಮಾಜ ಸುಧಾರಣೆ ಬಗ್ಗೆ ಮತ್ತು ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆ ಅವರು ಹೊಂದಿದ್ದರು ಎಂದರು.
ಕಾರ್ಮಿಕರ ಏಳಿಗೆಯನ್ನು ಸದಾ ಬಯಸುತ್ತಿದ್ದ ಅವರು, ದೇಶದ ಜನರು ಅಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ಹಸಿರು ಕ್ರಾಂತಿ ಪ್ರಾರಂಭಿಸಿ ನೆರವಾದರು. ಇಂತಹ ಮಹಾನ್ ನಾಯಕರ ಕೊಡುಗೆ, ತತ್ವಾದರ್ಶಗಳನ್ನು ನಾವುಗಳು ಪಾಲಿಸಿ, ನಮ್ಮ ಯುವಜನತೆಗೆ ಇಂತಹ ನಾಯಕರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಿಸಬೇಕು ಎಂದರು.
ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಬಾಬು ಜಗಜೀವನ ರಾಮ್ ಅವರು ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದಕ್ಷ ಆಡಳಿತಗಾರರಾಗಿದ್ದರು ಎಂದರು.
ಹಸಿರು ಕ್ರಾಂತಿಯ ಹರಿಕಾರರಾಗಿ ಜನಸಾಮಾನ್ಯರು ಎಂದೆಂದಿಗೂ ಮರೆಯದ ವ್ಯಕ್ತಿತ್ವ ಹೊಂದಿದ್ದರು, ರಾಜಕೀಯ ನಾಯಕರುಗಳಿಗೆ ಅವರು ಮಾದರಿ ಎಂದರು.
ನೂತನವಾಗಿ ಜಿಲ್ಲಾ ಎಸ್.ಸಿ ಮೂರ್ಚಾದ ಉಪಾಧ್ಯಕ್ಷ ರಾಜು ಮುಕ್ಕಣ್ಣ ಅವರು ಅಭಿನಂದನೆ ಸ್ವೀಕರಿಸಿ, ಬಾಬು ಜಗಜೀವನ ರಾಮ್ ಅವರ ಜಯಂತಿಯ ಶುಭಾಶಯ ಕೋರಿದರು.
ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್.ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ, ಹರಿ ಗಲಾಂಡೆ, ರಿಚರ್ಡ್ ಮಾರೆಡ್ಡಿ, ಭೀಮರಾವ ಸುಬೇದಾರ, ಮಲ್ಲಿಕಾರ್ಜುನ ಸಾತಖೇಡ, ಕುಮಾರ ರೆಡ್ಡಿ, ನಿರ್ಮಲ ಇಂಡಿ, ಯಂಕಮ್ಮ ಗೌಡಗಾಂವ, ಉಮಾಭಾಯಿ ಗೌಳಿ, ಹಾಜಪ್ಪ ಬಂಡಾರಿ, ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.