ಸುದ್ದಿ ಸಂಗ್ರಹ ವಾಡಿ
ಪಟ್ಟಣದ ನ್ಯೂ ಟೌನ್‌ನಲ್ಲಿ ಬೆಳಗಿನ ಬಳಗದ ಸದಸ್ಯರು ಭಾರತಾಂಬೆಗೆ ಜೈ ಘೋಷಿಸಿ, ಪರಸ್ಪರ ಅಭಿನಂದಿಸಿ ವಿಶ್ವಕಪ್ ಗೆಲುವನ್ನು ಸಂಭ್ರಮಿಸಿದರು.
ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಮಾತನಾಡಿ, ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ವಿಶ್ವ ವಿಜೇತವಾಗಿ ಹೊರಹೊಮ್ಮಿದೆ, ಇಡಿ ಭಾರತ ಖುಷಿಯಲ್ಲಿದೆ ಎಂದರು.
ಕೋಟ್ಯಾಂತರ ಭಾರತೀಯರ ಹೆಮ್ಮೆಯನ್ನು ಇಮ್ಮಡಿಗೊಳಿಸಿದ ಭಾರತದ ಯುವ ಕ್ರಿಕೆಟ್ ಪಡೆಯ ಕ್ರೀಡಾ ಸ್ಪೂರ್ತಿ ಜಗತ್ತಿನ ಕ್ರೀಡಾ ಪಟುಗಳಿಗೆ, ಕ್ರೀಡಾ ಪ್ರೇಮಿಗಳಿಗೆ, ಯುವಕರಿಗೆ ಮಾದರಿಯಾಗಿದೆ, ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಬೆಳಗಿನ ಬಳಗದ ಸದಸ್ಯರಾದ ಜಯದೇವ ಜೋಗಿ ಕಲಮಠ, ಕಾಶಿನಾಥ ಶೆಟಗಾರ, ಬಸವರಾಜ ಕೇಶ್ವರ, ಅಮೃತಪ್ಪ ದಿಗ್ಗಾಂವ, ಶ್ರೀನಿವಾಸ ಅಣ್ಣೆ, ಸತೀಶ ಸಾವಳಗಿ, ವಿಠಲ ರಾಠೋಡ ಸೇರಿದಂತೆ ಅನೇಕರು ಇದ್ದರು.