ಶುಕ್ರವಾರ ಬೆಳಗ್ಗೆ 10:15ಕ್ಕೆ ಬಜೆಟ್‌: ಪೆಟ್ರೋಲ್, ಡೀಸೆಲ್‌ ಮೇಲೆ 1 ರೂ. ಸೆಸ್ ?

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ದೀರ್ಘಕಾಲಿಕ ಮುಖ್ಯಮಂತ್ರಿಯಾಗಿ ರೆಕಾರ್ಡ್ ಮಾಡಿರುವ ಸಿಎಂ ಸಿದ್ದರಾಮಯ್ಯ ನಾಳೆ ದಾಖಲೆಯ 17ನೇ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ.

ಹಣಕಾಸು ಸಚಿವರೂ ಆಗಿರುವ ಸಿಎಂ, ನಾಳೆ ಬೆಳಗ್ಗೆ 10:15ಕ್ಕೆ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಗಾತ್ರ ನಾಲ್ಕೂವರೆ ಲಕ್ಷ ಕೋಟಿ ಮುಟ್ಟುವ ಸಾಧ್ಯತೆ ಇದೆ. ಕಳೆದ ಬಾರಿ ಆದಾಯ ಸಂಗ್ರಹದ ಗುರಿ ಮುಟ್ಟಿಲ್ಲ. ಇದರ ಪರಿಣಾಮವೂ 2026-27ನೇ ಸಾಲಿನ ಬಜೆಟ್ ಮೇಲೆ ಪರಿಣಾಮ ಬೀರಲಿದೆ.

ಸಾಲ ಮಾಡಿ ತುಪ್ಪ ತಿನ್ನುವುದು ರಾಜ್ಯಕ್ಕೆ ಹೊಸದೆನಲ್ಲ. ಈ ಬಾರಿ 75 ಸಾವಿರ ಕೋಟಿ ರೂ. ಸಾಲ ಮಾಡುವ ಲೆಕ್ಕಾಚಾರದಲ್ಲಿದ್ದು, ರಾಜ್ಯದ ಸಾಲ 8 ಲಕ್ಷದ 30 ಸಾವಿರ ದಾಟುವ ಸಾಧ್ಯತೆ ಹೆಚ್ಚು. ಗ್ಯಾರಂಟಿ ಯೋಜನೆಗಳ ಹೊರೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್‌, ಸಿಎಂ ಹಾದಿಯಾಗಿ ಕೆಲವರು ಮಾತನಾಡಿದ್ದಾರೆ. ಆದರೆ ಬಜೆಟ್‌ನಲ್ಲಿ ಪರಿಷ್ಕರಣೆ ಬಗ್ಗೆ ಸುಳಿವು ಕೊಡದೆ ಹಂತ ಹಂತವಾಗಿ ಲೆಕ್ಕಾಚಾರ ಹಾಕಲು ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಗ್ಯಾರಂಟಿಗಳಿಗೆ ಮೀಸಲಿಡುವ ಹಣ ಮುಂದುವರಿಸುವ ಜೊತೆಗೆ ಕಡಿಮೆ ಹಣ ಮೀಸಲಿಟ್ಟು ಮಹಿಳೆಯರಿಗೆ ರಿಯಾಯಿತಿ ಯೋಜನೆ ಘೋಷಣೆ ಮಾಡುವ ಸಾಧ್ಯತೆಯೂ ಇದೆ. ಈ ನಡುವೆ ಅಭಿವೃದ್ಧಿ ಯೋಜನೆಗಳತ್ತ ಗಮನಹರಿಸಬೇಕಿದ್ದು ಸಿಎಂ ಬ್ಯಾಲೆನ್ಸಿಂಗ್ ಬಜೆಟ್ ಮಂಡಿಸ್ತಾರೆ ಎನ್ನಲಾಗುತ್ತಿದೆ.

ಸಿದ್ದು@17 ಬಜೆಟ್: ಏನಿರಬಹುದು ?

  • ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲು, ಪರಿಷ್ಕರಣೆ ಅನುಮಾನ
  • ಲಕ್ಷಕ್ಕೂ ಅಧಿಕ ಸರ್ಕಾರಿ ಉದ್ಯೋಗ ಭರ್ತಿ ಬಗ್ಗೆ ಘೋಷಣೆ ಸಾಧ್ಯತೆ
  • ಪಂಜಾಬ್ ಮಾಡೆಲ್, ರೈತರ ತರಕಾರಿ ಸಾಗಾಟಕ್ಕೆ ಟೋಲ್ ಫ್ರೀ
  • ಪ್ರತಿ ಲೀಟರ್‌ ಪೆಟ್ರೋಲ್, ಡೀಸೆಲ್‌ ಮೇಲೆ 1 ರೂ ಸೆಸ್ ?
  • ಜಿಬಿಎಗೆ 10 ಸಾವಿರ ಕೋಟಿ ಅನುದಾನ ಸಾಧ್ಯತೆ
  • ಯುಕೆಪಿ ಮೇಲ್ದಂಡೆ ಯೋಜನೆಗೆ 6-8 ಸಾವಿರ ಕೋಟಿ ಅನುದಾನ
  • ನಗರಗಳ ಅಭಿವೃದ್ಧಿಗೆ ಮೆಗಾಸಿಟಿ ಯೋಜನೆ ಘೋಷಣೆ ಸಾಧ್ಯತೆ
  • 1-10ನೇ ತರಗತಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಘೋಷಣೆ
  • ಟನಲ್ ರೋಡ್, ಡಬಲ್ ಡೆಕ್ಕರ್ ರೋಡ್ ಯೋಜನೆ ವಿಸ್ತರಣೆ ಸಾಧ್ಯತೆ
  • ಅಲೆಮಾರಿ ಜನಾಂಗಕ್ಕೆ ವಿಶೇಷ ಪ್ಯಾಕೇಜ್
  • ರೈತರ ಎಲ್ಲಾ ಬೆಳೆಗಳಿಗೆ ವಿಶೇಷ ವಿಮಾ ಯೋಜನೆ ಘೋಷಣೆ ಸಾಧ್ಯತೆ
  • ಕ್ಯಾಬ್, ಟ್ಯಾಕ್ಸಿ, ಗೂಡ್ಸ್ ಚಾಲಕರಿಗೆ ನಿಗಮ ಮಂಡಳಿ ಸ್ಥಾಪನೆ.

Leave a Reply

Your email address will not be published. Required fields are marked *