ಸುದ್ದಿ ಸಂಗ್ರಹ ದಾವಣಗೆರೆ
ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಹಾಗೂ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ತಾಲೂಕಿನ ಕೋಲಮ್ಮನಹಳ್ಳಿ ಕಲ್ಲಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಾಂಬ್ ಸಿಡಿದಂತೆ ಶಬ್ಧವಾಗಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ವಿಚಿತ್ರ ಶಬ್ಧ ಕೇಳಿಸಿದ್ದು, ಕೆಲ ಮನೆಗಳಲ್ಲಿರುವ ಪಾತ್ರೆಗಳು ನೆಲಕ್ಕೆ ಬಿದ್ದಿವೆ. ಯಾವ ಕಾರಣಕ್ಕೆ ಈ ವಿಚಿತ್ರ ಶಬ್ಧ ಬಂದಿದೆ ಎನ್ನುವುದು ಕೂಡ ಯಕ್ಷ ಪ್ರಶ್ನೆಯಾಗಿದೆ. ಸ್ಥಳಕ್ಕೆ ಜಗಳೂರು ಠಾಣೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಜಗಳೂರು ತಹಸಿಲ್ದಾರ್ ಸಯ್ಯದ್ ಕಲಿಮ್’ವುಲ್ಲಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಜಗಳೂರು ತಾಲೂಕಿನಲ್ಲಿ ಆ ರೀತಿ ಯಾವುದೆ ಸ್ಫೋಟ ಸಂಭವಿಸಿಲ್ಲ. ವಿಜಯನಗರ ಕೂಡ್ಲಿಗಿ ತಾಲೂಕಿನ ಕಲ್ಲಳ್ಳಿ ಕಡೆಯಿಂದ ಸ್ಫೋಟದ ಅನುಭವ ಆಗಿದೆ ಎಂಬ ಮಾಹಿತಿ ಇದೆ. ಸ್ಥಳಕ್ಕೆ ಗ್ರಾಮಲೆಕ್ಕಿಗರನ್ನು ಕಳಿಸಿ ಮಾಹಿತಿ ಸಂಗ್ರಹಿಸಿದ್ದೆನೆ. ಜಗಳೂರು ತಾಲೂಕಿನ ಜನರು ಭಯಪಡುವ ಅಗತ್ಯವಿಲ್ಲ ಎಂದರು.