ಗಗನಕ್ಕೇರಿದ ಬಂಗಾರದ ಬೆಲೆ: 1.5 ಲಕ್ಷದ ಗಡಿ ದಾಟಿದ ಕೆ.ಜಿ ಬೆಳ್ಳಿ ಬೆಲೆ

ರಾಜ್ಯ

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೆ ದಿನಗಳು ಬಾಕಿಯಿದ್ದು, ಲಕ್ಷ್ಮೀ ಪೂಜೆಗೆ ಸಿದ್ಧತೆಗಳು ಆರಂಭವಾಗಿವೆ. ಜೊತೆಗೆ ಮದುವೆ ಸೀಜನ್ ಸಹ ಸ್ಟ್ರಾಟ್ ಆಗಿದೆ. ಆದರೆ ಈ ಸಮಯದಲ್ಲೇ ಬಂಗಾರ, ಬೆಳ್ಳಿ ಬಲು ಭಾರವಾಗಿದ್ದು, ಮಧ್ಯಮ ಮತ್ತು ಬಡ ವರ್ಗದವರಿಗೆ ಕೈಗೆಟುಕದಂತಾಗಿದೆ.

ದಿನದಿಂದ ದಿನಕ್ಕೆ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು, ಬಂಗಾರದ ಬೆಲೆಯಲ್ಲಿ ಆಲ್ ಟೈಮ್ ರೆಕಾರ್ಡ್ ನಿರ್ಮಾಣವಾಗ್ತಿದೆ. ಕಳೆದ ಒಂದು ವರ್ಷದಲ್ಲಿ 65% ರಷ್ಟು ದರ ಏರಿಕೆ ಆಗಿದ್ದರೂ ಸಹ ಚಿನ್ನದ ಮೇಲೆ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಇನ್ನು ಬೆಳ್ಳಿ ಒಂದು ವರ್ಷದಲ್ಲಿ 75% ಏರಿಕೆಯಾಗಿದೆ. ಹಿಂದಿನ ಯಾವ ವರ್ಷಗಳಲ್ಲೂ ಆಗದ ಬೆಲೆ ಏರಿಕೆ ಕಳೆದ ಅಕ್ಟೋಬರ್‌ನಿಂದ ಈ ವರ್ಷ ಅಕ್ಟೋಬರ್‌ನಲ್ಲಿ ಆಗಿದೆ. ದೀಪಾವಳಿ ಹಾಗೂ ಈಗಾಗಲೇ ಮದುವೆ ಸೀಜನ್ ಆರಂಭವಾಗಿದ್ದು, ಮಧ್ಯಮ ವರ್ಗ ಹಾಗೂ ಬಡವರ್ಗದ ಮಹಿಳೆಯರಿಗೆ ಬಂಗಾರ ಕೊಳ್ಳುವಂಗಿಲ್ಲ, ಮುಟ್ಟಂಗಿಲ್ಲ ಎನ್ನುವಂತಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,24,000 ರೂ. ಆಗಿದ್ದು, ಬೆಳ್ಳಿ ಕೆ.ಜಿಗೆ 1,60,000 ರೂ. ಆಗಿದೆ. ಪ್ರಮುಖವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿರೋದು, ವಿವಿಧ ದೇಶದ ಬ್ಯಾಂಕ್‌ಗಳು ಚಿನ್ನ ಕೊಳ್ಳುತ್ತಿರುವದು, ಟ್ರಂಪ್‌ನ ಟಾರಿಫ್ ನೀತಿ ಮೊದಲಾದ ಕಾರಣಗಳಿಂದ ಚಿನ್ನ, ಬೆಳ್ಳಿ ಏರಿಕೆಯಾಗುತ್ತಿದೆ.

ಇನ್ನೂ ಎರಡ್ಮೂರು ತಿಂಗಳು ಇದೆ ದರ ಇರಲಿದ್ದು, 10 ಗ್ರಾಂ ಚಿನ್ನದ ಬೆಲೆ 1,35,000 ರೂ. ಹಾಗೂ ಬೆಳ್ಳಿ ಕೆ.ಜಿಗೆ 1,75,000 ರೂ.ವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ. ಇನ್ನೂ ಒಂದೆರಡು ತಿಂಗಳಲ್ಲಿ ಕೇವಲ 10ರಿಂದ 15% ಮಾತ್ರ ಇಳಿಕೆಯಾಗುವ ನಿರೀಕ್ಷೆಯಿದೆ. ಹೆಚ್ಚಿನ ಇಳಿಕೆಯನ್ನು ನಿರೀಕ್ಷಿಸಲಾಗುತ್ತಿಲ್ಲ. ಹೀಗಾಗಿ ಶಾಸ್ತ್ರಕ್ಕಾಗಿ ಚಿನ್ನ ಖರೀದಿಸಿ, ಯಾವುದೆ ಕಾರಣಕ್ಕೂ ಚಿನ್ನದ ಮೇಲೆ ಹೂಡಿಕೆ ಮಾಡಬೇಡಿ ಎಂದು ಹಣಕಾಸು ತಜ್ಞರು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಮಧ್ಯಮ ಮತ್ತು ಬಡ ವರ್ಗದವರಲ್ಲಿಯೇ ಈ ಚಿನ್ನದ ಮೇಲಿನ ಕ್ರೇಜ್ ಹೆಚ್ಚಾಗಿದೆ. ಸದ್ಯಕ್ಕೆ ಚಿನ್ನ ಹಾಗೂ ಬೆಳ್ಳಿಯ ನಾಗಲೋಟಕ್ಕೆ ಬ್ರೇಕ್ ಬೀಳುವ ಲಕ್ಷಣಗಳಿಲ್ಲ.

Leave a Reply

Your email address will not be published. Required fields are marked *