ಚಿತ್ತಾಪುರ: ಕೋಲಿ ಸಮಾಜದ ಸಲಹಾ ಸಮಿತಿ ರಚನೆ

ತಾಲೂಕು

ಚಿತ್ತಾಪುರ: ತಾಲೂಕು ಕೋಲಿ ಸಮಾಜದ ಸಂಘಟನೆ ಸದೃಢಗೊಳಿಸಲು ಪದಾಧಿಕಾರಿಗಳಿಗೆ ಸಂಘಟನಾತ್ಮಕವಾಗಿ ಸಲಹೆ ಸೂಚನೆ ನೀಡಿ ಮಾರ್ಗದರ್ಶನ ಮಾಡಲು ಈ ಹಿಂದೆ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಮಾಜಪರವಾಗಿ ಹೋರಾಟ ಮಾಡಿದ ಅನುಭವ ಹೊಂದಿರುವ ಸಮಾಜದ ಹಿರಿಯರನ್ನೊಳಗೊಂಡ ಮುಖಂಡರ ಕೋಲಿ ಸಮಾಜದ ಸಲಹಾ ಸಮಿತಿ ರಚನೆ ಮಾಡಲಾಗಿದೆ ಎಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ ಬಾನರ ತಿಳಿಸಿದ್ದಾರೆ.

ಸಮಾಜದ ಹಿರಿಯ ಮುಖಂಡ ಭೀಮಣ್ಣಾ ಸಾಲಿ, ಬಸವರಾಜ ಚಿನ್ನಮಳ್ಳಿ, ಸುರೇಶ ಬೆನಕನಳ್ಳಿ, ಮಲ್ಲಿಕಾರ್ಜುನ ಎಮ್ಮೆನೋರ್, ಹಣಮಂತ ಸಂಕನೂರು, ದೇವಿಂದ್ರ ಅರಣಕಲ್, ಬಸಣ್ಣಾ ತಳವಾರ, ಚಂದ್ರು ಕಾಳಗಿ, ಶರಣಪ್ಪಾ ನಾಶಿ ಅಲ್ಲೂರ್ (ಬಿ), ಮಲ್ಲಣ್ಣಾ ಮೋಸಿನ್ ಅಲ್ಲೂರ್ (ಬಿ), ಮರೆಪ್ಪ ದಂಡಗುಂಡ, ವೆಂಕಟರಮಣ ಬೇವಿನಗಿಡ ಭಂಕಲಗಾ, ಶಿವರಾಯ ಹೊಸಮನಿ ಹೊಸೂರು, ಮಲ್ಲಿಕಾರ್ಜುನ ವಾಡ್ ರಾಮತೀರ್ಥ, ಮಲ್ಲಣ್ಣಾ ಎದುರಮನಿ ಹಲಕರ್ಟಿ, ಸಿದ್ದಣ್ಣಾ ದಂಡೋತಿ ನಾಲವಾರ, ನರಸಣ್ಣಾ ಬಾನರ ಕರದಾಳ, ಗುರುನಾಥ ಪೋಸ್ತಾ ಯಾಗಾಪೂರ, ಶ್ರೀಮಂತ ಜೀವಣಗಿ ಯರಗಲ್ ಅವರು ಸಲಹಾ ಸಮಿತಿಯಲ್ಲಿರುತ್ತಾರೆ ಎಂದು ಹೇಳಿದ್ದಾರೆ.

ತಾಲೂಕು ಕೋಲಿ ಸಮಾಜದ ಸರ್ವ ಘಟಕಗಳ ಪದಾಧಿಕಾರಿಗಳು ಸಮಾಜದ ಸಂಘಟನೆಗೆ ಸಲಹಾ ಸಮಿತಿಯ ಮಾರ್ಗದರ್ಶನ ಪಡೆದುಕೊಂಡು ತಾಲೂಕಿನಾದ್ಯಂತ ಸಂಘಟನೆಯ ಚಟುವಟಿಕೆಗಳನ್ನು ಕೈಗೊಳ್ಳುತ್ತೆನೆ. ಸಲಹಾ ಸಮಿತಿಯ ಮುಖಂಡರು ಕೈಗೊಳ್ಳುವ ನಿರ್ಣಯಕ್ಕೆ ಪದಾಧಿಕಾರಿಗಳು ಬದ್ಧರಾಗಿರುತ್ತೆವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *