ಕಲಬುರಗಿ: ಎಳ್ಳು ಚರ್ಮರೋಗಕ್ಕೆ ಪರಿಹಾರವಾದರೆ ಬೆಲ್ಲ ಕಫ ನಿವಾರಕ ಸಂಕಾಂತ್ರಿ ಆರೋಗ್ಯ ವರ್ಧಕ ಹಬ್ಬ ಎಂದು ಈರಣ್ಣಾ ದಸ್ಮಾ ಹೇಳಿದರು.
ನಗರದಲ್ಲಿ ವಿದ್ಯಾ ನಗರ ವೆಲ್ ಫೇರ್ ಸೊಸೈಯಿಟಿ ವತಿಯಿಂದ ಸಂಕ್ರಾಂತಿ ಹಬ್ಬದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಕಾಂತ್ರಿ ಹಬ್ಬದ ಹಿರಿಮೆ ಗರಮೆ ಕುರಿತು ಎಳ್ಳು ಬೀರುವುದು ಒಂದು ಸಂಪ್ರದಾಯ, ಇದು ಧಾರ್ಮಿಕವಷ್ಟೆ ಅಲ್ಲದೆ ವೈಜ್ಞಾನಿಕವಾಗಯೂ ಇದೊಂದು ಆರೋಗ್ಯ ವರ್ಧಕ ಹಬ್ಬವಾಗಿದೆ. ಬಿಸಿಲಿನ ತಾಪಕ್ಕೆ ಉಂಟಾಗುವ ಚರ್ಮ ರೋಗಗಳಿಗೆ ಎಳ್ಳು ವಾತಪರಿಹಾರವದರೆ, ಇದರೊಡನೆ ಬೆರೆಸುವ ಬೆಲ್ಲ ಕಫ ನಿವಾರಕವಾಗಿದೆ, ದೇಹದ ಉಷ್ಣದ ಕೊರತೆಯನ್ನು ನಿವಾರಿಸು ಉಷ್ಣ ಪದಾರ್ಥ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಎಳ್ಳು ಮತ್ತು ಬೆಲ್ಲದ ಸೇವನೆ ಹೆಚ್ಚು ಸೂಕ್ತ ಎಂದರು.
ಸುಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿ, ವಾತಾವರಣಕ್ಕೆ ತಕ್ಕಂತೆ ಆಹಾರ, ಉಡುಪು ಮತ್ತು ನಿದ್ದೆ ಇವುಗಳು ಉತ್ತಮತನದಿಂದ 89ನೇ ವಯಸ್ಸಿನಲ್ಲಿಯೂ ಆರೋಗ್ಯಯುತ ಜೀವನ ನಡೆಸುತ್ತಿರುವದೆ ಈರಣ್ಣಾ ದಸ್ಮಾ ಅವರ ಆರೋಗ್ಯದ ಗುಟ್ಟು ಎಂದರು.
ಸುಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಸೈಟಿಯ ಪದಾಧಿಕಾರಿಗಳಾದ ಉಮೇಶ ಶೆಟ್ಟಿ, ಗುರುಲಿಂಗಯ್ಯ ಮಠಪತಿ, ಬಸವಂತರಾವ ಜಾಬಶೆಟ್ಟಿ, ಸುಭಾಷ ಮಠಾಳೆ, ವಿಶ್ವನಾಥ ರಟಕಲ್, ಕಾಶಿನಾಥ ಚಿನ್ಮಳ್ಳಿ, ನಾಗಭೂಷಣ ಹಿಂದೂಡಿ, ಶಾಂತಯ್ಯ ಬೀದಿ ಮನಿ, ವಿರೇಶ ನಾಗಶೆಟ್ಟಿ, ಕರಣಕುಮಾರ ಆದೋಲಾ, ವಿನೋದಕುಮಾರ ಜನೆವರಿ, ನಾಗರಾಜ ಮುಗಳಿ, ರಮೇಶ ದಸ್ಮಾ, ಧರ್ಮರಾಜ ಹೆಬ್ಬಾಳ, ಎ.ಎಮ್ ಗೋಣಿ, ಸಂಗಮೇಶ ದಿವಟಿಗಿ, ಉದಯಕುಮಾರ ಪಡಶೆಟ್ಟಿ, ಶರಣಯ್ಯ ಪಠಪತಿ, ರೇವಣಸಿದ್ದಪ್ಪಾ ಭೊಗಶೆಟ್ಟಿ, ಮಡಿವಾಳಪ್ಪಾ ಸಜ್ಜನಶೆಟ್ಟಿ, ಬಸವರಾಜ ಜಾಬಶೆಟ್ಟಿ. ಶಿವಶರಣಪ್ಪಾ ಬಿರಾದಾರ, ಸಂಗಣ್ಣಾಗೌಡ ಬಿರಾದಾರ, ಬಾಲರೆಡ್ಡಿ ಪೋಕಲ್, ಮದಕನಳ್ಳಿ, ಸುಭಾಷ ನರೋಣಾ, ಶಿವಣ್ಣಾ ಕಂಠಾಳ, ಸಿದ್ದಣ್ಣ ಆಲೂರ ಇದ್ದರು.