ಪ್ರಿಯಾಂಕ್ ಖರ್ಗೆ ಒಬ್ಬ ಪ್ರಬುದ್ಧ ರಾಜಕಾರಣಿ, ಬಿಜೆಪಿಯವರ ಷಡ್ಯಂತ್ರ ಫಲಿಸದು: ಓಂಕಾರೇಶ್ವರ ರೇಶ್ಮಿ

ಜಿಲ್ಲೆ

ಚಿತ್ತಾಪುರ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರು ಒಬ್ಬ ಪ್ರಬುದ್ಧ ಹಾಗೂ ಪ್ರಾಮಾಣಿಕ ರಾಜಕಾರಣಿಗಳಾಗಿದ್ದಾರೆ. ಬಿಜೆಪಿಯವರು ನಮ್ಮ ನಾಯಕರ ಮೇಲೆ ಮಾಡುತ್ತಿರುವ ರಾಜಕೀಯ ಷಡ್ಯಂತ್ರ ಫಲಿಸದು ಎಂದು ಕಾಂಗ್ರೆಸ್ ಮುಖಂಡ ಓಂಕಾರೇಶ್ವರ ರೇಶ್ಮಿ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಗುತ್ತಿಗೆದಾರ ಸಚಿನ ಪ್ರಕರಣದಲ್ಲಿ ನಮ್ಮ ನಾಯಕರನ್ನು ಎಳೆದು ತರುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೂ ನಮ್ಮ ಪ್ರಿಯಾಂಕ್ ಖರ್ಗೆಯವರಿಗೂ ಯಾವುದೇ ಸಂಭಂದವಿಲ್ಲದಿದ್ದರು ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಎಂದರು.

ಲಕ್ಷಾಂತರ ಅಭಿಮಾನಿಗಳನ್ನು ಹಾಗೂ ಆಪ್ತರನ್ನು ಪ್ರಿಯಾಂಕ್ ಖರ್ಗೆಯವರು ಹೊಂದಿದ್ದಾರೆ. ಆಪ್ತರ ವಯಕ್ತಿಕ ವಿಚಾರಗಳನ್ನು ಸಚಿವರ ಮೇಲೆ ಹಾಕಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯದು. ಈ ವಿಚಾರವನ್ನು ಪ್ರಜ್ಞಾವoತ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಬಿಜೆಪಿಯವರು ನಮ್ಮ ನಾಯಕರ ಮೇಲೆ ಆರೋಪ ಮಾಡುವ ಮುನ್ನ ಮೊದಲು ಸರಿಯಾಗಿ ತಿಳಿಕೊಂಡು ಹೋಮ್ ವರ್ಕ್ ಮಾಡಿಕೊಂಡು ಮಾತನಾಡಲಿ ಎಂದರು.

ಪ್ರಕರಣದ ಪಾರದರ್ಶಕ ತನಿಖೆಗಾಗಿ ಪ್ರಿಯಾಂಕ್ ಖರ್ಗಯವರು ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಿಐಡಿಗೆ ವಹಿಸಿ ನಿಷ್ಪಕ್ಷ ತನಿಖೆ ಕೈಗೊಳ್ಳುವಂತೆ ಹೇಳಿದ್ದಾರೆ. ಇದರಿಂದ ಇಷ್ಟರಲ್ಲೇ ಸತ್ಯ ಹೊರ ಬರಲಿದೆ ಎಂದರು.

Leave a Reply

Your email address will not be published. Required fields are marked *