ಸುದ್ದಿ ಸಂಗ್ರಹ ಕಲಬುರಗಿ
ಜಿಲ್ಲಾ ಪಂಚಾಯಿತಿಯ 48 ಕ್ಷೇತ್ರಗಳ ಮೀಸಲಾತಿಯ ಅಂತಿಮ ಪಟ್ಟಿಯ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಅಕ್ಟೋಬರ್ 9ರಂದು ಕರಡು ಪಟ್ಟಿ ಪ್ರಕಟಿಸಿದ್ದ ಸರ್ಕಾರವು, ಆಕ್ಷೇಪಣೆಗಳ ಸಲ್ಲಿಕೆಗೆ ಅಕ್ಟೋಬರ್ 19ರ ಸಂಜೆ 5 ಗಂಟೆ ವರೆಗೆ ಕಾಲಾವಕಾಶ ನೀಡಲಾಗಿತ್ತು.
ಕರಡು ಪಟ್ಟಿಯಲ್ಲಿ ಚಿಮ್ಮನಚೋಡ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಇದೀಗ ಅಂತಿಮ ಮೀಸಲಾತಿ ಪಟ್ಟಿಯಲ್ಲಿ ಚಿಮ್ಮನಚೋಡ ಕ್ಷೇತ್ರದ ಮೀಸಲಾತಿ ಬದಲಿಸಿದ್ದು, ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ.
48 ಕ್ಷೇತ್ರಗಳ ಮೀಸಲಾತಿಯ ಅಂತಿಮ ಅಧಿಸೂಚನೆಯ ವಿವರ
ಅವರಾದ(ಬಿ): ಎಸ್ಸಿ, ಪಟ್ಟಣ: ಸಾಮಾನ್ಯ, ನಂದಿಕೂರ: ಸಾಮಾನ್ಯ ಮಹಿಳೆ, ಫರಹತಾಬಾದ್: ಸಾಮಾನ್ಯ, ಖಣದಾಳ: ಸಾಮಾನ್ಯ ಮಹಿಳೆ, ಕುಸನೂರ; ಎಸ್ಸಿ ಮಹಿಳೆ, ನೆಲೋಗಿ: ಹಿಂದುಳಿದ ವರ್ಗ ‘ಅ’ ಮಹಿಳೆ, ಮಂದೇವಾಲ: ಸಾಮಾನ್ಯ, ಕೋಳಕೂರ: ಸಾಮಾನ್ಯ, ಆಂದೋಲಾ: ಎಸ್ಸಿ, ಖಜೂರಿ: ಹಿಂದುಳಿದ ವರ್ಗ ‘ಅ’ ಮಹಿಳೆ, ತಡಕಲ್: ಸಾಮಾನ್ಯ ಮಹಿಳೆ.
ಸರಸಂಬಾ: ಸಾಮಾನ್ಯ, ನರೋಣಾ: ಎಸ್ಸಿ, ಜಿಡಗಾ: ಹಿಂದುಳಿದ ವರ್ಗ ‘ಬ’, ಮಾದನಹಿಪ್ಪರಗಾ: ಸಾಮಾನ್ಯ ಮಹಿಳೆ, ನಿಂಬರ್ಗಾ: ಎಸ್ಸಿ ಮಹಿಳೆ, ಕರಜಗಿ: ಹಿಂದುಳಿದ ವರ್ಗ ‘ಅ’ ಮಹಿಳೆ, ಬಡದಾಳ: ಸಾಮಾನ್ಯ ಮಹಿಳೆ, ದೇವಲ ಗಾಣಗಾಪುರ: ಹಿಂದುಳಿದ ವರ್ಗ ‘ಅ’, ಅತನೂರ: ಎಸ್ಸಿ ಮಹಿಳೆ, ಗೊಬ್ಬೂರ(ಬಿ): ಸಾಮಾನ್ಯ.
ಸೊಂತ: ಎಸ್ಸಿ, ಮಹಾಗಾಂವ: ಸಾಮಾನ್ಯ ಮಹಿಳೆ, ಅರಣಕಲ್: ಎಸ್ಸಿ ಮಹಿಳೆ, ವಿ.ಕೆ ಸಲಗರ: ಸಾಮಾನ್ಯ, ಹೆಬ್ಬಾಳ: ಸಾಮಾನ್ಯ, ಟೆಂಗಳಿ: ಎಸ್ಸಿ, ಕೋಡ್ಲಿ: ಹಿಂದುಳಿದ ವರ್ಗ ‘ಬ’ ಮಹಿಳೆ, ಇಜೇರಿ: ಸಾಮಾನ್ಯ, ಅರಳಗುಂಡಗಿ: ಸಾಮಾನ್ಯ ಮಹಿಳೆ, ಮಳ್ಳಿ: ಎಸ್ಸಿ, ಮಳಖೇಡ: ಸಾಮಾನ್ಯ.
ಆಡಕಿ: ಸಾಮಾನ್ಯ ಮಹಿಳೆ, ಕೋಡ್ಲಾ: ಸಾಮಾನ್ಯ, ಮುಧೋಳ: ಎಸ್ಸಿ ಮಹಿಳೆ, ಕೋಲಕುಂದಾ: ಹಿಂದುಳಿದ ವರ್ಗ ‘ಅ’, ಚಿಮ್ಮನಚೋಡ: ಸಾಮಾನ್ಯ ಮಹಿಳೆ, ಐನೋಳ್ಳಿ: ಎಸ್ಟಿ ಮಹಿಳೆ, ಕುಂಚಾವರಂ: ಎಸ್ಸಿ, ಸುಲೇಪೇಟ: ಸಾಮಾನ್ಯ ಮಹಿಳೆ, ನಿಡಗುಂದಾ: ಎಸ್ಸಿ ಮಹಿಳೆ, ದಂಡೋತಿ: ಹಿಂದುಳಿದ ವರ್ಗ ‘ಅ’ ಮಹಿಳೆ, ಭೀಮನಳ್ಳಿ: ಎಸ್ಸಿ ಮಹಿಳೆ, ನಾಲವಾರ: ಸಾಮಾನ್ಯ ಮಹಿಳೆ, ಇಂಗಳಗಿ: ಸಾಮಾನ್ಯ, ರಾವೂರ: ಸಾಮಾನ್ಯ ಮಹಿಳೆ, ಭಂಕೂರ: ಹಿಂದುಳಿದ ವರ್ಗ ‘ಅ’.