ಬಲಿಪಾಡ್ಯಮಿ – ಮಂತ್ರಾಲಯದಲ್ಲಿ ಮೂಲ ರಾಮದೇವರಿಗೆ ಶ್ರೀಗಳಿಂದ ಮಹಾಭಿಷೇಕ

ಜಿಲ್ಲೆಯ

ಸುದ್ದಿ ಸಂಗ್ರಹ ರಾಯಚೂರು
ದೀಪಾವಳಿ ಬಲಿಪಾಡ್ಯಮಿ ಹಿನ್ನೆಲೆ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಬ್ರಹ್ಮ ಕರಾರ್ಚಿತ ಶ್ರೀ ಮೂಲ ರಾಮದೇವರು ಮತ್ತು ಇತರ ಸಂಸ್ಥಾನ ಮೂರ್ತಿಗಳಿಗೆ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿ ಮಹಾ ಅಭಿಷೇಕ ನೆರವೇರಿಸಿದರು.

ಮಹಾ ಅಭಿಷೇಕದ ನಂತರ ಮೂಲ ರಾಮದೇವರು, ದಿಗ್ವಿಜಯ ರಾಮದೇವರು ಮತ್ತು ಜಯರಾಮ ದೇವರುಗಳಿಗೆ ಪವಿತ್ರ ಗಂಧ ಲೇಪನ ನೆರವೇರಿಸಿದರು. ನಂತರ ಶ್ರೀಗಳು ಸಂಸ್ಥಾನ ಪೂಜೆಯನ್ನು ನಡೆಸಿದರು. ಶ್ರೀ ಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹಾ ಅಭಿಷೇಕ ಅಪರೂಪದ ಮತ್ತು ಆಳವಾದ ಮಹತ್ವದ ಆಚರಣೆಯಾಗಿದೆ. ಇದನ್ನು ವರ್ಷಕ್ಕೆ ಎರಡು ಬಾರಿ ಮಾತ್ರ ಆಚರಿಸಲಾಗುತ್ತದೆ.

ಶ್ರೀ ರಾಮ ನವಮಿಯ ಸಮಯದಲ್ಲಿ ಮತ್ತು ಬಲಿಪಾಡ್ಯಮಿಯ ಮಂಗಳಕರ ದಿನದಂದು ಮಾತ್ರ ಬ್ರಹ್ಮ ಕರಾರ್ಚಿತ ಶ್ರೀ ಮೂಲ ರಾಮದೇವರಿಗೆ ಮಹಾ ಅಭಿಷೇಕ ಮಾಡಲಾಗುತ್ತದೆ. ಬಲಿಪಾಡ್ಯಮಿ ಹಿನ್ನೆಲೆ ಮಹಾ ಅಭಿಷೇಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಮಠಕ್ಕೆ ಆಗಮಿಸಿದ್ದರು. ಮಹಾ ಅಭಿಷೇಕ ಬಳಿಕ ಶ್ರೀಗಳಿಂದ ಆಶೀರ್ವಾದ ಪಡೆದರು.

Leave a Reply

Your email address will not be published. Required fields are marked *