ಮದುವೆ ಆಗ್ತಿನಿ ಅಂತ ನಂಬಿಸಿ ಯುವತಿಗೆ ವಂಚನೆ ಆರೋಪ: ಎಫ್‌ಐಆರ್‌ ಆದ್ರೂ ಪೊಲೀಸರು ಸೈಲೆಂಟ್

ಜಿಲ್ಲೆಯ

ಸುದ್ದಿ ಸಂಗ್ರಹ ದಾವಣಗೆರೆ
ಪ್ರೀತಿ ಪ್ರೇಮದ ಹೆಸರಿನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಯುವಕನೊಬ್ಬ ವಂಚಿಸಿದ ಪ್ರಕರಣ ಹರಿಹರದಲ್ಲಿ ನಡೆದಿದೆ.

ಮಲೆಬೆನ್ನೂರು ಮೂಲದ ಮುಷ್ರಫ್ ಖಾನ್ ಎಂಬಾತನ ವಿರುದ್ಧ ದಾವಣಗೆರೆಯ ಯುವತಿ ವಂಚನೆ ಆರೋಪ ಮಾಡಿದ್ದಾಳೆ. ಮುಷ್ರಫ್ ಮದುವೆ ಆಗುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಈಗ ನಾಪತ್ತೆಯಾಗಿದ್ದಾನೆ. ಅಲ್ಲದೆ ಪ್ರಭಾವಿ ನಾಯಕರ ಸಂಬಂಧಿ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಮದುವೆ ಆಗಲು 25 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ನ್ಯಾಯಕ್ಕಾಗಿ ಯುವತಿ ಹೋರಾಟ ಮಾಡುತ್ತಿದ್ದಾಳೆ. ಯುವಕ ಹಾಗೂ ಆತನಿಗೆ ಸಾಥ್ ನೀಡುತ್ತಿರುವವರನ್ನು ಬಂಧಿಸುವಂತೆ ಯುವತಿ ಆಗ್ರಹಿದ್ದಾಳೆ.

ದಾವಣಗೆರೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ಆದರೂ ಸಹ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ ಎಂದು ಯುವತಿ ಅಸಮಾಧಾನ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *