ಬಾಂಬ್ ಬೆದರಿಕೆ ಮಧ್ಯೆಯೂ ಅಮಿತಾಬ್ ಬಚ್ಚನ್ ರವಿವಾರ ಬುಲೆಟ್‌ಪ್ರೂಫ್ ಗ್ಲಾಸ್ ಸುರಕ್ಷತೆಯೊಂದಿಗೆ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಅಮಿತಾಬ್ ಮನೆ ಮೇಲೆ ಇತ್ತೀಚೆಗೆ ಬಾಂಬ್ ದಾಳಿ ಮಾಡುವುದಾಗಿ ಇ-ಮೇಲ್ ಬೆದರಿಕೆ ಬಂದಿತ್ತು. ಇದಾದ ಬಳಿಕ ಬಿಗ್‌ಬಿಯ ಮುಂಬೈ ಮನೆಯ ಹೊರಗೆ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ. ಆದರೆ ಅಮಿತಾಬ್ ಬಚ್ಚನ್ ಪ್ರತಿ ರವಿವಾರ ಅವರ ಫ್ಯಾನ್ಸ್‌ಗಳನ್ನು ಮೀಟ್ ಆಗುತ್ತಾರೆ. ಆದ್ದರಿಂದ ಈ ರವಿವಾರವೂ ಕೂಡ ಅವರ ಮನೆಯ ಮುಂದೆ ಜನರು ನೆರೆದಿದ್ದರು. ಆದರೆ ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ಅಮಿತಾಬ್ ಬಚ್ಚನ್ ಅವರ ಸುತ್ತ ಬುಲೆಟ್‌ಪ್ರೂಫ್ ಗ್ಲಾಸ್‌ಗಳನ್ನು ಬಳಸಲಾಗಿದೆ. ಈ ಸಂದರ್ಭದಲ್ಲಿ ಮಗ ಅಭಿಷೇಕ್ ಬಚ್ಚನ್ ಕೂಡ ತಂದೆಯ ಹತ್ತಿರದಲ್ಲಿ ನಿಂತು ಭದ್ರೆತೆ ಗಮನಿಸಿದ್ದಾರೆ.
ಕೆಲ ವಾರಗಳ ಹಿಂದಷ್ಟೆ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಆಗಿತ್ತು. ಘಟನೆಯಲ್ಲಿ ನಟ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ಅಮಿತಾಬ್ ಬಚ್ಚನ್, ಅಕ್ಷಯಕುಮಾರ್ ಸೇರಿದಂತೆ ಹಲವು ಸೆಲೆಬ್ರಿಟಿಗಳ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಬೆದರಿಕೆಗಳ ಹೊರತಾಗಿಯೂ, ಅಮಿತಾಬ್ ಕೆಲಸದಲ್ಲಿ ನಿರತರಾಗಿದ್ದಾರೆ. ಅವರು ಪ್ರಸ್ತುತ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 18ರ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ.