ವಾಡಿ: ಪಂಚಾಳ ನಿವಾಸದಲ್ಲಿ ‘ಆಶೀರ್ವಾದ ದೀಪ’ ಬೆಳಗಿದ ಬಿಜೆಪಿ ಮುಖಂಡರು
ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಪಂಚಾಳ ನಿವಾಸದಲ್ಲಿ ಬಿಜೆಪಿ ಮುಖಂಡರು ಮತ್ತು ಅಭಿಮಾನಿಗಳ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಮಂಗಳವಾರ ‘ಆಶೀರ್ವಾದದ ದೀಪ’ ಬೆಳಗಲಾಯಿತು. ಪ್ರಧಾನಿಯವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಜಂಟಿ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಅಭಿಮಾನಿಗಳು ಮಂಗಳವಾರ ದೀಪಗಳನ್ನು ಬೆಳಗಿಸುವ ಮೂಲಕ ವಿಶೇಷವಾಗಿ ಸಂಭ್ರಮಿಸಿದರು. ಪ್ರಧಾನಿಯವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಈ ಸಂದರ್ಭದಲ್ಲಿ ಜಂಟಿ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, “ಮೋದಿ ಅವರ ಕಳೆದ 25 ವರ್ಷಗಳ ಸಾರ್ವಜನಿಕ ಜೀವನವು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ, ಜನಕಲ್ಯಾಣ ಮತ್ತು ಸುಶಾಸನಕ್ಕೆ ಸಾಕ್ಷಿಯಾಗಿದೆ. ಅವರು ದಣಿವರಿಯದ ಕಾಯಕಯೋಗಿ ಹಾಗೂ ತ್ಯಾಗ-ದೂರದೃಷ್ಟಿಯ ಸಂಕೇತವಾಗಿದ್ದಾರೆ. ಅಚಲ ಸಂಕಲ್ಪದೊಂದಿಗೆ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಅವರು ನಡೆಸುತ್ತಿರುವ ಶ್ರಮ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ,” ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಪ್ರಮುಖ ಮುಖಂಡರಾದ ವಿಠಲ ವಾಲ್ಮೀಕ ನಾಯಕ, ಮಲ್ಲಿಕಾರ್ಜುನ ಸಾತಖೇಡ, ರಾಚಣ್ಣ ಶೀಲವಂತ, ತೇಜು ಚವ್ಹಾಣ, ಸಿದ್ದಮ್ಮ ಶಿಲವಂತ, ಅಶೋಕ ಪಂಚಾಳ, ಮಲ್ಲಮ್ಮ ಹಡಪದ, ಅಮೀನ ಪಟೇಲ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.