ಸುದ್ದಿ ಸಂಗ್ರಹ ಚಿತ್ತಾಪುರ
ತಾಲೂಕಿನ ಕುಂದನೂರು ಗ್ರಾಮದ ಸಂಗಮೇಶ್ವರ ದೇವಸ್ಥಾನ ಬಳಿ ಅರ್ಧರುಂಡ ಮತ್ತು ಒಂದು ಬಲಗೈ ಇಲ್ಲದ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಆ ಮೃತ ದೇಹವನ್ನು ನಾಯಿಗಳು ಸುತ್ತುವರಿದು ಎಳೆದಾಡುತ್ತಿದ್ದವು. ನಾಯಿಗಳ ಗುಂಪು ಕಂಡ ಜನರು ಹೋಗಿ ನೋಡಿದ್ದಾರೆ. ತಕ್ಷಣ ನಾಯಿಗಳನ್ನು ಅಲ್ಲಿಂದ ಓಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತರನ್ನು ಶಹಾಬಾದ್ ಮೂಲದ ಮಹ್ಮದ್ ಫಯಾಜ್ (26) ಎಂದು ಗುರುತಿಸಲಾಗಿದೆ. ಈತ ಕಳೆದ ಕೆಲವು ದಿನಗಳ ಹಿಂದೆ ಶಹಾಬಾದ್ ಪಟ್ಟಣದ ಮನೆಯಿಂದ ನಾಪತ್ತೆಯಾಗಿದ್ದ.
ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ತಿರುಮಲೇಶ ಕೆ ಅವರು ಮಾಹಿತಿ ಕಲೆ ಹಾಕಿದ್ದಾರೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.