ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಾಳಗಿ
ವಿದ್ಯಾರ್ಥಿಗಳು ಆತ್ಮ ವಿಶ್ವಾಸ, ಪರಿಶ್ರಮದಿಂದ ಯಶಸ್ಸು ಕಂಡುಕೊಳ್ಳಲು ಸಾಧ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಅಬ್ದುಲ್ ರೌಫ್ ಆಫಖಾನ್ ಹೇಳಿದರು.‌

ತಾಲೂಕಿನ ಟೆಂಗಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 8, 9 ಮತ್ತು 10ನೇ‌ ತರಗತಿಯ ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರನ್ನು ಕರ್ನಾಟಕ ರಕ್ಷಣಾ ವೇದಿಕೆ ‘ಸನ್ಮಾನ ಸಮಾರಂಭ’ದಲ್ಲಿ ಸನ್ಮಾನಿಸಿ ಗೌರವಿಸಿ, ಮಾತನಾಡಿದ ಅವರು, ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದರು.

ಅತಿ ಹೆಚ್ಚು ಅಂಕ ಪಡೆದವರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿದರೆ ಮಕ್ಕಳಿಗೆ ಪ್ರೇರಣೆ ನೀಡಿದಂತಾಗುತ್ತದೆ. ಅಲ್ಲದೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಉತ್ತಮವಾಗಿ ಅಧ್ಯಯನ ಮಾಡಿ ಅತ್ಯುನ್ನತ ಹುದ್ದೆಗೆ ಅಲಂಕರಿಸಬಹುದು ಎಂದರು.

ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯಗುರು ಸೇವಂತಾ ಚವ್ಹಾಣ, ತಾಲೂಕ ಯುವ ಘಟಕದ ಅಧ್ಯಕ್ಷ ಲಿಂಗಬಸವ ಸೇಡಂ, ಗ್ರಾಮ ಘಟಕದ ಅಧ್ಯಕ್ಷ ಅಜೀಜ್ ಬಳಗಾರ, ಕಾರ್ಯಕರ್ತರಾದ ಫಿರ್ದೋಸ್, ಅಬ್ದುಲ್’ಸಾಬ್ ಆಫಖಾನ್, ಸಾದಿಕ್ ಅತ್ತಾರ, ಅಬ್ಬಾಸ್ ಅಲಿ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *