ರಾಜ್ಯದ ರೇಷನ್‌ ಕಾರ್ಡ್‌ದಾರರಿಗೆ ಶಾಕಿಂಗ್‌ ಸುದ್ದಿ: ಇ-ಕೆವೈಸಿ ಮಾಡದಿದ್ರೆ ಕಾರ್ಡ್‌ನಿಂದ ಹೆಸರು ಡಿಲೀಟ್‌

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ರಾಜ್ಯದ ಪಡಿತರ ಚೀಟಿದಾರರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಸರ್ಕಾರದ ಆದೇಶ ಪಾಲಿಸದಿದ್ದರೆ ರೇಷನ್ ಕಾರ್ಡ್‌ನಲ್ಲಿ ಹೆಸರು ಡಿಲೀಟ್‌ ಆಗಲಿದೆ.

ರೇಷನ್‌ ಕಾರ್ಡ್‌ದಾರರು ಇ-ಕೆವೈಸಿ (e-KYC) ಮಾಡಿಸಬೇಕು ಎಂದು ಆರೋಗ್ಯ ಇಲಾಖೆ ಕಳೆದ ತಿಂಗಳು ಆದೇಶ ಮಾಡಿತ್ತು. ಆದರೆ ಒಂದೂವರೆ ತಿಂಗಳಾದ್ರು 10% ಜನ ಕೂಡ ಆದೇಶ ಪಾಲನೆ ಮಾಡಿಲ್ಲ. ರೇಷನ್ ಕಾರ್ಡ್‌ನಲ್ಲಿ ಹೆಸರು ಡಿಲೀಟ್‌ ಆದರೆ ಗ್ಯಾರಂಟಿ ಯೋಜನೆಯ ಸೌಲಭ್ಯ ಕೂಡ ಸಿಗಲ್ಲ.

2.67 ಕೋಟಿ ರೇಷನ್ ಕಾರ್ಡ್ ಪೈಕಿ ಇ-ಕೆವೈಸಿ ಆಗಿರೋದು ಬರಿ 26.03 ಲಕ್ಷ ಮಾತ್ರ. ಬರಿ 9.73% ಅಷ್ಟೆ ಆಗಿದೆ.‌ ರೇಷನ್ ಕಾರ್ಡ್‌ನಲ್ಲಿ ಇರುವ ಕುಟುಂಬದ ಸದಸ್ಯರು ಎಲ್ಲರೂ ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಮಾಡಿಸಲೇಬೇಕು. ಆದರೆ ಜನರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಇ-ಕೆವೈಸಿ ಮಾಡಿಸುವುದಕ್ಕೆ ಸೆಪ್ಟೆಂಬರ್ ವರೆಗೂ ಅವಕಾಶ ಇದೆ. ಒಂದು ವೇಳೆ ಮಾಡದಿದ್ದರೆ ಹೆಸರು ಡಿಲೀಟ್ ಆಗಲಿದೆ.‌ ಇ-ಕೆವೈಸಿ ಆಗದಿದ್ದರೆ, ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗುವ ಸಾಧ್ಯತೆ ಇದೆ.

ಗೃಹಲಕ್ಷ್ಮಿ ಪರಿಷ್ಕರಣೆಗೆ ಆಹಾರ ಇಲಾಖೆಯಿಂದ ಫಲಾನುಭವಿಗಳ ಮಾಹಿತಿ ಪಡೆಯೋದಕ್ಕೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಆಹಾರ ಇಲಾಖೆಯಡಿ ಬಯೋಮೆಟ್ರಿಕ್, ಇ-ಕೆವೈಸಿ ಆಗದಿದ್ದರೆ ಗೃಹಲಕ್ಷ್ಮಿ ಫಲಾನುಭವಿ ಆಗೋದು ಅನುಮಾನ. ಗ್ಯಾರಂಟಿ ಯೋಜನೆಯಿಂದ ವಂಚಿತರಾಗಬೇಕಾಗುತ್ತದೆ.

Leave a Reply

Your email address will not be published. Required fields are marked *