‘ವಂದೇ ಮಾತರಂ’ಗೆ ಅಪಮಾನ ಮಾಡಿದ್ರೆ ಶಿಕ್ಷೆ ವಿಧಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ

ನವದೆಹಲಿ

ಸುದ್ದಿ ಸಂಗ್ರಹ ನವದೆಹಲಿ
ವಂದೇ ಮಾತರಂ ಗೀತೆಯನ್ನು ಅವಮಾನಿಸಿದರೆ ಶಿಕ್ಷೆ ವಿಧಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.

ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ ರಾಷ್ಟ್ರಗೀತೆ ‘ಜನ ಗಣ ಮನ’ದಂತೆ ಸಮಾನವಾದ ಕಾನೂನು ಸ್ಥಾನಮಾನ ನೀಡುವ ಹಾಗೂ ಗೀತೆಗೆ ಅವಮಾನ ಅಥವಾ ಅಡ್ಡಿಪಡಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ‘ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ (ತಿದ್ದುಪಡಿ) ಮಸೂದೆ, 2026’ ಸಂಸತ್ತಿನಲ್ಲಿ ಈಚೆಗೆ ಅಂಗೀಕಾರಗೊಂಡಿತ್ತು.

ಲೋಕಸಭೆಯು ಜುಲೈ 30 ರಂದು ಮಸೂದೆ ಅಂಗೀಕರಿಸಿತ್ತು. ರಾಜ್ಯಸಭೆಯು ಒಂದು ದಿನ ಮುಂಚಿತವಾಗಿ ಅದನ್ನು ಅಂಗೀಕರಿಸಿತ್ತು. ಮಸೂದೆ ಈಗ ರಾಷ್ಟ್ರಪತಿಗಳ ಅಂಕಿತ ಪಡೆದು ಕಾನೂನಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಮೊದಲ ಬಾರಿಗೆ ಕೆಂಪು ಕೋಟೆಯಲ್ಲಿ ವಂದೇ ಮಾತರಂ ಹಾಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *