ಚಿಕ್ಕಮಗಳೂರು ಡಿಸಿ ಹೆಸರಲ್ಲಿ ಸೈಬರ್ ವಂಚಕರ ಗಾಳ: 50,000 ಹಣ ಕಳೆದುಕೊಂಡ ಆಹಾರ ಇಲಾಖೆ ಅಧಿಕಾರಿ

ಜಿಲ್ಲೆಯ

ಸುದ್ದಿ ಸಂಗ್ರಹ ಚಿಕ್ಕಮಗಳೂರು
ಇಲ್ಲಿನ ಡಿಸಿ ಭನ್ವರ್ ಸಿಂಗ್ ಮೀನಾ ಹೆಸರು, ಫೋಟೋ ಬಳಸಿ ಆಹಾರ ಇಲಾಖೆ ಅಧಿಕಾರಿಯೊಬ್ಬರಿಗೆ ಸೈಬರ್‌ ವಂಚಕರು 50,000 ರೂ. ವಂಚಿಸಿದ ಪ್ರಕರಣ ನಡೆದಿದೆ.

ಡಿಸಿ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿ, ಆಹಾರ ಇಲಾಖೆಯ ಉಪನಿರ್ದೇಶಕ ಯೋಗಾನಂದ್ ಅವರಿಗೆ ತುರ್ತು ಹಣ ಹಾಕುವಂತೆ ವಂಚಕರು ಮೆಸೇಜ್‌ ಮಾಡಿದ್ದರು. ಇದನ್ನು ನಂಬಿದ್ದ ಅಧಿಕಾರಿ, ವಂಚಕ ಕಳಿಸಿದ್ದ ಅಕೌಂಟ್‌ ನಂಬರ್‌ಗೆ 50,000 ರೂ. ಹಣ ಹಾಕಿದ್ದರು. ವಂನೆಯಾಗಿರೋದು ತಿಳಿದ ಬಳಿಕ ಸೆನ್ ಠಾಣೆಯಲ್ಲಿ ಅವರು ದೂರು ದೂರು ದಾಖಲಿಸಿದ್ದಾರೆ.

ವಂಚನೆಕಾರರು ಬಳಸಿದ್ದು ಥೈಲ್ಯಾಂಡ್‌ನ ನಕಲಿ ವಾಟ್ಸಪ್ ಬಿಸಿನೆಸ್ ಖಾತೆ ಎಂಬುದು ತಿಳಿದು ಬಂದಿದೆ. ಫೇಕ್ ಪ್ರೊಫೈಲ್ ಸೃಷ್ಟಿಸಿ, ಸಾರ್ವಜನಿಕರು, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮೆಸೇಜ್ ಮಾಡಿ ಎಲ್ಲಿದ್ದೀರಿ ? ಹೇಗಿದ್ದೀರಿ ? ಎಂದು ಸಂದೇಶ ಕಳುಹಿಸಿ ನಂಬಿಕೆ ಗಳಿಸುವ ತಂತ್ರ ಬಳಸಿ ವಂಚಕರು ಈ ಕೃತ್ಯ ಎಸಗಿದ್ದಾರೆ.

ಥೈಲ್ಯಾಂಡ್ ನಂಬರ್‌ನಿಂದ ಬರುವ ವಾಟ್ಸಪ್ ಮೆಸೇಜ್, ಕರೆಗಳಿಗೆ ಪ್ರತಿಕ್ರಿಯಿಸದಂತೆ, ಯಾವುದೆ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರ ಅಥವಾ ಹಣಕಾಸಿನ ಮಾಹಿತಿ ಹಂಚಿಕೊಳ್ಳದಂತೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *