ಸುದ್ದಿ ಸಂಗ್ರಹ ಕಾಳಗಿ
ರಸ್ತೆಯಲ್ಲಿ ಸಿಕ್ಕ 11,500 ರೂ ಹೊಸ ಹೆಬ್ಬಾಳದ ಮೆಕಾನಿಕ್ ರವರ ನೆರವಿನೊಂದಿಗೆ ಹಣ ಕಳೆದುಕೊಂಡವರಿಗೆ ಹಿಂದಿರುಗಿಸುವ ಮೂಲಕ ವಿದ್ಯಾರ್ಥಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ತಾಲೂಕಿನ ಹೊಸ ಹೆಬ್ಬಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ 9ನೇ ತರಗತಿಯ ನಬಿಸಾಬ್ ತಂದೆ ಗೈಬನ್ ಸಾಬ್ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಯಾಗಿದ್ದಾನೆ.
ಗ್ರಾಮದ ಮಾಜಿ ಅಧ್ಯಕ್ಷ ನಾಗರಾಜ್ ದಿವಟಗಿ ನೇತೃತ್ವದಲ್ಲಿ ಹಣ ಕಳೆದುಕೊಂಡವರನ್ನು ಪತ್ತೆ ಹಚ್ಚಿ ಅವರ ಹಣ ಅವರಿಗೆ ಮರಳಿಸಲಾಯಾತು.
ವಿದ್ಯಾರ್ಥಿಯ ಸಾಮಾಜಿಕ ಜವಾಬ್ದಾರಿಯನ್ನು ಮೆಚ್ಚಿದ ಹಣ ಪಡೆದ ಮಹಿಳೆ, ಮಗ ಮತ್ತು ಊರಿನ ಗಣ್ಯರು ಜುಲೈ 23 ರಂದು ಬೆಳಿಗ್ಗೆ ಪ್ರಾರ್ಥನಾ ಸಮಯದಲ್ಲಿ ಶಾಲೆಗೆ ಆಗಮಿಸಿ, ಅವರ ಮಗ ಮತ್ತು ಊರಿನ ಗಣ್ಯರು ಸೇರಿ ವಿದ್ಯಾರ್ಥಿ ನಬಿಸಾಬ್ ತಂದೆ ಗೈಬನ್ ಸಾಬ್’ನನ್ನು ಸನ್ಮಾನಿಸಿ ಅಭಿನಂದಿಸಿದರು. ವಿದ್ಯಾರ್ಥಿಯ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
9ನೇ ತರಗತಿಯ ವಿದ್ಯಾರ್ಥಿಯ ಪ್ರಾಮಾಣಿಕತೆಗೆ ಮುಖ್ಯ ಗುರುಗಳು, ಶಿಕ್ಷಕರು, ಎಸ್’ಡಿಎಂಸಿ ಯವರು ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪ್ರಶಂಸಿಸಿ ಅಭಿನಂದಿಸಿದರು.