ಚಿತ್ತಾಪುರ: ಹಳೆಯ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಸಿಟಿಎಸ್‌ಎಸ್‌ಐಎ ಮನವಿ

ಪಟ್ಟಣದ

ಸುದ್ದಿ ‌ ಸಂಗ್ರಹ ಚಿತ್ತಾಪುರ
ತಾಲೂಕು ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಕೆಎಸ್‌ಎಸ್‌ಐಡಿಸಿ’ಯ ಸಹಾಯಕ ಮಹಾಪ್ರಬಂಧಕ ಮಲ್ಲಿಕಾರ್ಜುನ ಜಾಕಾ ಅವರಿಗೆ, ಚಿತ್ತಾಪುರ ಪೇಟೆಯ ಸರ್ವೆ ನಂ. 112/2 ಮತ್ತು 113ರ ಹಳೆಯ ಕೈಗಾರಿಕಾ ವಸಾಹತು ಅಭಿವೃದ್ಧಿಪಡಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರಮುಖ ಬೇಡಿಕೆಗಳು
ಒಳ ರಸ್ತೆಗಳ ಅಭಿವೃದ್ಧಿ, ಭೂಗತ ಒಳಚರಂಡಿ, ಮಳೆ ನೀರು ಹರಿಸುವ ಚರಂಡಿ ವ್ಯವಸ್ಥೆ, ನೀರಿನ ಸರಬರಾಜು ಪೈಪ್‌ ಲೈನ್,
ಕಾಂಪೌಂಡ್ ಗೋಡೆ ನಿರ್ಮಾಣ ಮತ್ತು ಬೀದಿ ದೀಪ ಅಳವಡಿಕೆ, ಬಾಕಿ ಇರುವ ಮಾರಾಟ ಪತ್ರಗಳ ನೋಂದಣಿ, ಕೈಗಾರಿಕಾ ವಸಾಹತು ನಿರ್ವಹಣೆಯನ್ನು ಚಿತ್ತಾಪುರ ಪುರಸಭೆಗೆ ಹಸ್ತಾಂತರಿಸುವುದು, ಅರ್ಹ ಕೈಗಾರಿಕಾ ನಿವೇಶನ ಹಂಚಿಕೆದಾರರಿಗೆ ಖಾತೆ ಉತಾರ ನೀಡಬೇಕು ಎಂದು ರೈತರು ಮನವಿ ಸಲ್ಲಿಸಿದರು.

ಇದೆ ವೇಳೆ ಉದ್ಯಮಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸುದೀರ್ಘ ಹಾಗೂ ರಚನಾತ್ಮಕ ಚರ್ಚೆ ನಡೆಯಿತು.

ಮಲ್ಲಿಕಾರ್ಜುನ ಜಾಕಾ ಅವರು ಉದ್ಯಮಿಗಳ ಅಹವಾಲುಗಳು ಮತ್ತು ಸಲಹೆಗಳನ್ನು ಆಲಿಸಿ, ಸಮಸ್ಯೆಗಳ ಪರಿಹಾರಕ್ಕಾಗಿ ಆದ್ಯತೆಯ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದೆ ಸಂದರ್ಭದಲ್ಲಿ ಸಿಟಿಎಸ್‌ಎಸ್‌ಐಎ ವತಿಯಿಂದ ಕೆಎಸ್‌ಎಸ್‌ಐಡಿಸಿ ಸಹಾಯಕ ಮಹಾಪ್ರಬಂಧಕ ಮಲ್ಲಿಕಾರ್ಜುನ ಜಾಕಾ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸಿಪಿಎಸ್‌ಎಸ್‌ಐಎ ಅಧ್ಯಕ್ಷ ಸಯ್ಯದ್ ನಿಜಾಮುದ್ದೀನ್ ಚಿ, ಉಪಾಧ್ಯಕ್ಷ ಶರಣರೆಡ್ಡಿ ಇಜಾರ್, ಕಾರ್ಯದರ್ಶಿ ಅಬ್ದುಲ್ ಬಾಸಿತ್, ಮುಖಂಡರಾದ ಮುಖ್ತಾರ್ ಪಟೇಲ್, ರಶೀದ್, ರಘುನಾಥ್ ರೆಡ್ಡಿ, ಶಿವ ಚೌಧರಿ, ತಯ್ಯಬ್, ಕೆಎಸ್‌ಎಸ್‌ಐಡಿಸಿ ಇಂಜಿನಿಯರ್‌ಗಳು ಸೇರಿದಂತೆ ಕೈಗಾರಿಕಾ ಘಟಕಗಳ ಮಾಲೀಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *