ಸುದ್ದಿ ಸಂಗ್ರಹ ಶಹಾಬಾದ್
ತಾಲೂಕಿನ ಗೋಳಾ (ಕೆ) ಗ್ರಾಮದ ನಿಜಾಮ ಬಜಾರ ಬಡಾವಣೆಯ ಸದಾಶಿವ ಬೆಂಕಿತಾತ ಮಠಕ್ಕೆ ಕಿರಿಯ ಪೀಠಾಧಿಪತಿ ಸದ್ಗುರು ಮಂಗಲಸಿಂಗ್ ಬೆಂಕಿತಾತ ಅಧಿಕಾರ ವಹಿಸಿಕೊಂಡರು.
ಜೇವರ್ಗಿ ತಾಲೂಕಿನ ಯನಗುಂಟಿಯ ಸದಾಶಿವ ಬೆಂಕಿತಾತ ಮಠದಿಂದ ಗುರುವಾರ ಸಂಜೆ ಪುರಪ್ರವೇಶ ಮಾಡಿದರು. ಸ್ಥಳೀಯ ನೂರಾರು ಭಕ್ತರು ಪುಷ್ಪವೃಷ್ಠಿಯೊಂದಿಗೆ ಭವ್ಯ ಸ್ವಾಗತ ಕೋರಿದರು.
ಶ್ರೀಮಠದ ಕಿರಿಯ ಸ್ವಾಮಿಯಾಗಿ ಅಧಿಕಾರಿ ವಹಿಸಿಕೊಂಡ ನಂತರ ಪ್ರತಿ ಗುರುವಾರ, ಶುಕ್ರವಾರ, ರವಿವಾರ ಮತ್ತು ಅಮವಾಸ್ಯೆ ದಿನ ಶಹಾಬಾದ್ ಮಠದಲ್ಲಿ ಭಕ್ತರಿಗೆ ಲಭ್ಯವಿದ್ದು ಮತ್ತು ಮೂಲ ಮಠ ಯನಗುಂಟಿಯಲ್ಲಿ ಪ್ರತಿ ಸೋಮವಾರ, ಮಂಗಳವಾರ ಮತ್ತು ಹುಣ್ಣಿಮೆ ದಿನ ಭಕ್ತರ ಭೇಟಿಗೆ ಲಭ್ಯವಿರುವಿರುವರು, ಭಕ್ತರು ಸದರಿ ದಿನಗಳಲ್ಲಿ ಆಯಾ ಸ್ಥಳಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂಧರ್ಭದಲ್ಲಿ ಮಠದ ಸಮಿತಿ ಅಧ್ಯಕ್ಷ ಗುಂಡೇರಾವ ಮಾಣಿಕ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಕಣಮೇಶ್ವರ, ಸಮಿತಿಯ ರಮೇಶ ಭಟ್ಟ, ಸುರೇಂದ್ರಸಿಂಗ್ ಠಾಕೂರ, ಶಂಬುಲಿಂಗ ನಾಯ್ಕಲ್, ವಿಶ್ವನಾಥ ರಾಠೋಡ, ಛೋಟು ಖಾಸಿಂಸಾಬ, ಹೈಯಾಳಪ್ಪ, ಭಕ್ತರಾದ ರಾಕೇಶ ಮಾಣಿಕ ಸೇರಿದಂತೆ ಗೋಳಾ(ಕೆ), ನಿಜಾಮ ಬಜಾರ್ ಭಾಗದ ನೂರಾರು ಭಕ್ತರು ಭಾಗವಹಿಸಿದ್ದರು.