ಬಳ್ಳಾರಿ: 3.50 ಲಕ್ಷ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ‌ ಭ್ರಷ್ಟ ಅಧಿಕಾರಿ

ಜಿಲ್ಲೆ

ಸುದ್ದಿ ಸಂಗ್ರಹ ಬಳ್ಳಾರಿ
3.50 ಲಕ್ಷ ಲಂಚ ಪಡೆಯುವಾಗ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಭ್ರಷ್ಟ ಅಧಿಕಾರಿಯೊಬ್ಬ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ನಗರಾಭಿವೃದ್ಧಿ ಪ್ರಾಧಿಕಾರದ ಸರ್ವೇಯರ್ ಶಾಂತಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಲೇಔಟ್ ಪ್ಲ್ಯಾನ್ ಡೆವಲಪ್ಮೆಂಟ್ ಅಪ್ರೂವಲ್ ಮಾಡಲು ವೀರೇಶ್ ಎಂಬವರ ಬಳಿ ಸರ್ವೇಯರ್ ಹಣಕ್ಕೆ ಬೇಡಿಕೆ ಇಟ್ಟಿದ್ದ. ವೀರೇಶ್ ಅವರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಶಾಂತಮೂರ್ತಿ ಪರವಾಗಿ ಮೊಹಮ್ಮದ್ ಸಾಜೀದ್ ಎಂಬಾತ ವೀರೇಶ್‌ನಿಂದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

Leave a Reply

Your email address will not be published. Required fields are marked *