ವಾಡಿಯಲ್ಲಿ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ….ಸುದ್ದಿ ಸಂಗ್ರಹ ವಾಡಿ
ಪುರಸಭೆ, ಬೆಳಗಿನ ಬಳಗ ಮತ್ತು ಪತಂಜಲಿ ಯೋಗ ಸಮಿತಿಯ ಸಹಯೋಗದಲ್ಲಿ ಜೂನ್ 21ರಂದು ಮುನಿಯಪ್ಪ ದಾಸ ಶಾಲಾ ಆವರಣದಲ್ಲಿ ಬೆಳಿಗ್ಗೆ 6.30ರಿಂದ 7.30ರ ವರೆಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಬೆಳಗಿನ ಬಳಗದ ಸದಸ್ಯ ಬಸವರಾಜ ಕೇಶ್ವಾರ ಹೇಳಿದರು…..’ಆರೋಗ್ಯಕರ ಜೀವನಕ್ಕಾಗಿ, ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎನ್ನುವ ಘೋಷವಾಕ್ಯದೊಂದಿಗೆ 12ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುವುದು’ ಎಂದು ತಿಳಿಸಿದರು.….ಯೋಗ ಶಿಕ್ಷಕರಾದ ವೀರಣ್ಣ ಯಾರಿ, ಮಲ್ಲಯ್ಯ ಸ್ವಾಮಿ ಅವರಾದಿ ಅವರು ಯೋಗಾಭ್ಯಾಸ ಮಾಡಿಸಲಿದ್ದು, ಯೋಗಾಸಕ್ತರು, ಆರೋಗ್ಯಾಸಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಿಸಬೇಕೆಂದು ಕೊರಿದ್ದಾರೆ…..ಯೋಗ ದಿನಾಚರಣೆಯಂದು ವಿಶೇಷ ಅತಿಥಿಗಳಾಗಿ ಸ್ಥಳೀಯ ಆರಕ್ಷಕ ಉಪ ನಿರೀಕ್ಷಕರಾದ ತಿರುಮಲೇಶ್ ಕುಂಬಾರ, ರೈಲ್ವೆ ಆರಕ್ಷಕ ಉಪ ನಿರೀಕ್ಷಕ ವೀರಭದ್ರ ಎಚ್.ಎಸ್, ಶಿಕ್ಷಕರಾದ ವೀರಭದ್ರಪ್ಪ ಆರ್.ಕೆ, ಶ್ರೀಮತಿ ಭಾರತಿ ದಾಸ ಅವರು ಭಾಗವಹಿಸಲಿದ್ದಾರೆ ಎಂದರು.