ಚರಂಡಿ ಪಕ್ಕ ಬೆಳೆದ ಗಿಡಗಂಟಿಗಳ ತೆರವಿಗೆ ಆಗ್ರಹ
ಸುದ್ದಿ ಸಂಗ್ರಹ ಶಹಾಬಾದ್
ಗ್ರಾಮದ ಚರಂಡಿಗಳ ಪಕ್ಕ ಗಿಡಗಂಟೆಗಳು ಅತಿಯಾಗಿ ಬೆಳೆದು ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ ಹೀಗಾಗಿ ಕೂಡಲೆ ಗಿಡಗಂಟಿಗಳ ತೆರವು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಯಲ್ಲಾಲಿಂಗ ಹಯ್ಯಾಳಕರ್ ಆಗ್ರಹಿಸಿದ್ದಾರೆ……ತಾಲೂಕಿನ ತೋನಸನಹಳ್ಳಿ (ಎಸ್) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಾ(ಕೆ) ಗ್ರಾಮದಲ್ಲಿ ರಸ್ತೆಯ ಪಕ್ಕ ಗಿಡಗಂಟೆ ಬೆಳೆದ ಕಾರಣ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ನಿಂತು ದುರ್ವಾಸನೆ ಉಂಟಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಸೊಳ್ಳೆಗಳು ಹಾಗೂ ವಿಷಕಾರಿ ಕೀಟಗಳ ಉತ್ಪತ್ತಿಗೆ ಇದು ಕಾರಣವಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಎದುರಾಗಿದೆ ಎಂದರು……ಶಾಲಾ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಸಂಚಾರ ಮಾಡುವ ರಸ್ತೆಗಳ ಪಕ್ಕದಲ್ಲೆ ಗಿಡಗಂಟೆ ಬೆಳೆದಿರುವುದರಿಂದ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತೋನಸನಹಳ್ಳಿ (ಎಸ್) ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡಲೆ ಸ್ಥಳ ಪರಿಶೀಲನೆ ನಡೆಸಿ, ಚರಂಡಿಗಳ ಪಕ್ಕದಲ್ಲಿರುವ ಗಿಡಗಂಟೆಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಗ್ರಾಮದಲ್ಲಿ ಸ್ವಚ್ಛತೆ ಮತ್ತು ಆರೋಗ್ಯಕರ ವಾತಾವರಣ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.