ಸುದ್ದಿ ಸಂಗ್ರಹ ಕೋಲಾರ
ಸಾರ್ವಜನಿಕ ಹಿತ ದೃಷ್ಠಿಯಿಂದ ಕೆಜಿಎಫ್ ಜಿಲ್ಲಾ ಪೊಲೀಸ್ ನಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ.
ಏಕಾಏಕಿ 50 ಸಿಬ್ಬಂದಿಯನ್ನ ಸಾರ್ವತ್ರಿಕ ಹಿತ ದೃಷ್ಠಿಯಿಂದ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. 7 ಜನ ಸಹಾಯಕ ಸಬ್ ಇನ್ಸ್ ಪೆಕ್ಟರ್ ಸೇರಿ 43 ಜನ ಮುಖ್ಯಪೇದೆಗಳನ್ನ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ ಅವರು ಪೊಲೀಸ್ ಠಾಣೆಗಳಲ್ಲಿ ಪಾರದರ್ಶಕ, ಜನ ಸ್ನೇಹಿ ಮಾಡುವ ಉದ್ದೇಶ ಹೊಂದಿದ್ದಾರೆ. ಹಾಗಾಗಿ ಹಲವು ವರ್ಷಗಳ ಕಾಲ ಒಂದೆ ಠಾಣೆಯಲ್ಲಿ ಬೀಡು ಬಿಟ್ಟಿದ್ದ, ಜೊತೆಗೆ ಠಾಣೆಗಳ ಮೇಲೆ ಹಿಡಿತ ಹೊಂದಿದ್ದ ಸಿಬ್ಬಂದಿಗೆ ಕೆಜಿಎಫ್ ಪೊಲೀಸ್ ಇಲಾಖೆ ಶಾಕ್ ಕೊಟ್ಟಿದೆ.
ಕೆಲವರು 5 ರಿಂದ 8 ವರ್ಷಗಳ ಕಾಲ ಒಂದೆ ಠಾಣೆ, ಪಿಐ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನ ಗಡಿಯಲ್ಲಿರುವ ಕ್ಯಾಸಂಬಳಿ, ಕಾಮಸಮುದ್ರ, ಬೂದಿಕೋಟೆ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ.