ಸುದ್ದಿ ಸಂಗ್ರಹ ಶಹಾಬಾದ್
ಕಾರಿನಲ್ಲಿ ಉಸಿರುಗಟ್ಟಿ ಮೂರು ವರ್ಷದ ಮಗು ಸಾವನಪ್ಪಿರುವ ಘಟನೆ ಶಹಾಬಾದ್ ತಾಲೂಕಿನ ತೊನಸನಹಳ್ಳಿ (ಎಸ್) ಗ್ರಾಮದಲ್ಲಿ ನಡೆದಿದೆ.
ಕೊಟ್ಟುರೇಶ್ವರ ಎಂಬವರ ಮೂರು ವರ್ಷದ ಮಗು ಬಸವಪ್ರಭು ಮೃತ ದುರ್ದೈವಿ. ಮಗುವನ್ನು ಕರೆದುಕೊಂಡು ಶಾಲೆಗೆ ಕಾರಿನಲ್ಲಿ ಹೋಗಿದ್ದ ಪೋಷಕರು ಶಾಲೆ ಬಳಿ ಕಾರು ಪಾರ್ಕ್ ಮಾಡಿ ಲಾಕ್ ಮಾಡದೆ ಹೊಗಿದ್ದರು. ಈ ವೇಳೆ ಮಗು ಆಟವಾಡುತ್ತಾ ಕಾರಿನೊಳಗೆ ಹೋಗಿದೆ. ಆಗ ಕಾರಿನ ಎಲ್ಲಾ ಡೋರ್‌ಗಳು ಲಾಕ್ ಆಗಿವೆ.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಗು ಎಲ್ಲಿ ಹೋಯಿತು ಎಂದು ಹುಡುಕಾಡಿದ್ದ ಪೋಷಕರು ಬಳಿಕ ಕಾರು ಓಪನ್ ಮಾಡಿದಾಗ ದುರಂತ ಬೆಳಕಿಗೆ ಬಂದಿದೆ.
ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.