ಸಾವಿನಲ್ಲೂ ಸ್ವಾತಂತ್ರ್ಯಕ್ಕಾಗಿ ಪರಿತಪಿಸಿದ ಸಾವರ್ಕರ್: ವೀರಣ್ಣ ಯಾರಿ

ಪಟ್ಟಣದ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಜಯಂತಿ ಪ್ರಯುಕ್ತ, ಮುಖಂಡರು ಪುಷ್ಪ ನಮನ‌ ಸಲ್ಲಿಸಿ ವೀರ ಸಾವರ್ಕರ್’ರ ಜಯ ಘೋಷಿಸಿದರು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಜೈಲಿನಲ್ಲಿ ಅಂಡಮಾನ್‌ನ ಕಾಲಾಪಾನಿ ಜೈಲಿನಲ್ಲಿ ಅನುಭವಿಸಿದ ಚಿತ್ರಹಿಂಸೆಗಳು ಅತ್ಯಂತ ಕ್ರೂರವಾಗಿದ್ದವು, ಅಂತಹ ಪರಿಸ್ಥಿತಿಯಲ್ಲೂ ದೇಶದ ಸ್ವಾತಂತ್ರ್ಯಕ್ಕಾಗಿ ಪರಿತಪಿಸುತ್ತಿದ್ದ ಅಪ್ಪಟ ದೇಶ ಪ್ರೇಮಿ ಸಾವರ್ಕರ್ ಎಂದರು.

ಸಾವರ್ಕರ್ ಅವರು 1911 ರಿಂದ 1921ರ ವರೆಗೆ ಸುಮಾರು 10 ವರ್ಷಗಳ ಕಾಲ ಅನುಭವಿಸಿದ ಕಠಿಣ ಶಿಕ್ಷೆ ಮತ್ತು ಅಮಾನವೀಯ ಚಿತ್ರಹಿಂಸೆಗಳು ಸಾವಿಗಿಂತಲೂ ಭೀಕರವಾಗಿದ್ದವು ಎಂದರು.

ಸಾವರ್ಕರ್‌ ಬ್ರಿಟಿಷರ ಬಳಿ ಕ್ಷಮೆ ಕೋರಿದರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲಿಲ್ಲ. ಗಾಂಧಿಜಿ ಹತ್ಯೆ ಹಿಂದೆಯೂ ಅವರ ಕೈವಾಡವಿತ್ತು ಎಂದೆಲ್ಲ ಸುಳ್ಳು ಆರೋಪಗಳನ್ನು ದೇಶ ವಿರೋಧಿಗಳು ಹಿಂದಿನಿಂದಲೂ, ಇಂದಿಗೂ ಮಾಡುತ್ತಿದ್ದಾರೆ. ಆದರೆ ಸತ್ಯ ಅರಿಯಬೇಕಾದರೆ ಸಾರ್ವಕರ್ ಇತಿಹಾಸ ತಿಳಿಯಬೇಕ ಎಂದರು.

ಜೈಲಿನಿಂದ ಹೊರಬಂದು ಸಂಘಟನೆ ಬಲಪಡಿಸದ ಸಾವರ್ಕರ್‌, ಛತ್ರಪತಿ ಶಿವಾಜಿ ಪರಾಕ್ರಮಗಳನ್ನು ಯುವ ಮನಸ್ಸುಗಳನ್ನು ತುಂಬುವ ಕೆಲಸ ಮಾಡಿದರು. ಬ್ರಿಟಿಷರ ವಿರುದ್ಧ ಹೋರಾಡಲು ಕ್ರಾಂತಿಕಾರಿಗಳನ್ನು ಹುಟ್ಟುಹಾಕಿದರು. ಎರೆಡೆರಡು ಬಾರಿ ಜೀವಾವಧಿ ಶಿಕ್ಷೆಗೊಳಗಾಗಿ ಸಾವು ಕಣ್ಣೆದುರಿದ್ದರು, ಸ್ವಾತಂತ್ರ್ಯ ಹೋರಾಟಕ್ಕೆ ಯುವ ಸಮೂಹಕ್ಕೆ ಸ್ಪೂರ್ತಿಯಾದರು ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ವಾಲ್ಮೀಕ ನಾಯಕ, ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ತುಕಾರಾಮ ರಾಠೋಡ, ಕಿಶನ ಜಾಧವ, ಶಿವಶಂಕರ ಕಾಶೆಟ್ಟಿ, ಮಲ್ಲಿಕಾರ್ಜುನ ಸಾತಖೇಡ, ನಾಗರಾಜ ಗೌಡ ಗೌಡಪ್ಪನೂರ, ದತ್ತಾ ಬಾರ್ಟಕ್ಕೆ,ಯಂಕಮ್ಮ ಗೌಡಗಾಂವ, ಕಾಶಿನಾಥ ಶೆಟಗಾರ, ಗುಂಡುಗೌಡ ಚಾಮನೂರ, ಹೀರಾ ರಾಠೋಡ, ದತ್ತಾತ್ರೇಯ ಗೌಡಗಾಂವ, ಶ್ರೀಶೈಲ
ಸೊಲಹಳ್ಳಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *