ವಿಜಯೇಂದ್ರ ಮೆಟ್ರೋ‌ ಪ್ರಯಾಣ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಚಿತ್ತಾಪುರ
ವಿಜಯೇಂದ್ರ ಮೆಟ್ರೋ ಹತ್ತಿರುವ ಬಗ್ಗೆ ಮಾದ್ಯಮಗಳು ಪದೆ ಪದೆ ಸುದ್ದಿ ಬಿತ್ತರಿಸುತ್ತಿದ್ದು, ಆದರೆ ಈ ಪರಿಸ್ಥಿತಿಗೆ ಯಾರು ಕಾರಣ ಎಂದು ಯಾಕೆ ಕೇಳುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು‌ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಮಾಡಬೂಳ ಗ್ರಾಮದ ಬಳಿ ನಿರ್ಮಾಣವಾಗಿರುವ ನೂತನ ಮೃಗಾಲಯ ಉದ್ಘಾಟನೆ ನೆರವೇರಿಸಿದ‌ ನಂತರ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,‌ ಮೋದಿ ವಿದೇಶದಿಂದ ತಂದ ಪ್ರಾಣಿಗಳು ಸತ್ತು ಹೋದವು. ಈಗ ನಾವು ತರುವ ಪ್ರಾಣಿಗಳನ್ನು ಸರಿಯಾಗಿ‌ ನಿರ್ವಹಣೆ ಮಾಡಿ ಸಂರಕ್ಷಿಸಲಾಗುವುದು ಎಂದು ಪ್ರಿಯಾಂಕ್ ಹೇಳಿದರು.

ದೇಶ ಕಷ್ಟದ ಸ್ಥಿತಿಯಲ್ಲಿದ್ದಾಗ ಮೋದಿ ವಿದೇಶಕ್ಕೆ ಹೋಗುತ್ತಾರೆ. ಆರ್ಥಿಕ‌ ಸ್ಥಿತಿಗತಿ, ಪೆಟ್ರೊಲಿಯಂ ಬೆಲೆ ಏರಿಕೆ ಬಗ್ಗೆ ಸಂಸತ್ತಿನಲ್ಲೆ ಹೇಳಬೇಕಿತ್ತು‌ ನೆದರ್’ಲ್ಯಾಂಡ್ಸ್’ಗೆ ಯಾಕೆ‌ ಹೋಗಬೇಕಿತ್ತು ಎಂದು‌ ಖರ್ಗೆ ಕುಟುಕಿದರು

Leave a Reply

Your email address will not be published. Required fields are marked *