ಟೆಂಗಳಿ ಸರ್ಕಾರಿ ಪ್ರೌಢಶಾಲೆಗೆ ಶೇ.90 ಫಲಿತಾಂಶ……ಕಾಳಗಿ: 2025-26ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ, ಪರೀಕ್ಷೆಯಲ್ಲಿ ತಾಲೂಕಿನ ಟೆಂಗಳಿ ಸರಕಾರಿ ಪ್ರೌಢಶಾಲೆ ಶೇ.90 ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮಾಡಿದೆ. ……ಪರೀಕ್ಷೆಗೆ ಹಾಜರಾಗಿದ್ದ 49 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಯ ಶೈಕ್ಷಣಿಕ ಸಾಧನೆ ಮಾಡಿದ್ದಾರೆ……ಶಾಲೆಯಲ್ಲಿ ಭಾಗ್ಯಶ್ರೀ 544 (ಶೇ.87) ಅಂಕ ಪಡೆದು ಅಗ್ರಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ, ಮಹೇಶ್, ಪ್ರಿಯಾ ತಲಾ 518 (ಶೇ.83) ಅಂಕ ಪಡೆದು ಮತ್ತು ನಿಖಿಲ್ ಶೇ.80 ರಷ್ಟು ಅಂಕ ಪಡೆದು ಶಾಲೆಯ ಗೌರವ ಹೆಚ್ಚಿಸಿದ್ದಾರೆ…… ಶಾಲೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕಿ ಸೇವಂತಾ ಚವ್ಹಾಣ, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು ಮತ್ತು ಗ್ರಾಮದ ಮುಖಂಡರು ಶುಭ ಹಾರೈಸಿದ್ದಾರೆ……ಶಿಕ್ಷಕರ ಪರಿಶ್ರಮ, ವಿದ್ಯಾರ್ಥಿಗಳ ನಿರಂತರ ಶ್ರಮ ಮತ್ತು ಪೋಷಕರ ಸಹಕಾರದಿಂದ ಉತ್ತಮ ಫಲಿತಾಂಶ ಸಾಧ್ಯವಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.