ಕಣ್ಣಿನ ಉಚಿತ ತಪಾಸಣೆ ಶಿಬಿರ…..ಸುದ್ದಿ ಸಂಗ್ರಹ ಶಹಾಬಾದ್
ನಗರದ ಸೇಂಟ್ ಥಾಮಸ್ ಚರ್ಚ್‌ನಲ್ಲಿ ಇತ್ತೀಚೆಗೆ ಕರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಕಡಗಂಚಿ, ಕಲಬುರಗಿಯ ಅನುಗ್ರಹ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಚಿತ್ತಾಪುರ ತಾಲೂಕು ವೈದ್ಯಾಧಿಕಾರಿಗಳ ಕಚೇರಿ ಹಾಗೂ ಸೇಂಟ್ ಥಾಮಸ್ ಚರ್ಚ್ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು…..ಕಾರ್ಯಕ್ರಮವನ್ನು ಫಾದರ್ ವಿಲಿಯಂ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಕಣ್ಣು
ನಮ್ಮ ದೇಹದ ಪ್ರಮುಖ ಅಂಗ. ಅದರ ರಕ್ಷಣೆ ಅಗತ್ಯವಿದೆ. ಅವುಗಳಿಗೆ ತೊಂದರೆಯಾದಾಗ ಕಾಲಕಾಲಕ್ಕೆ ತಪಾಸಣೆ
ಮಾಡಿಸಿಕೊಳ್ಳಬೇಕು ಎಂದರು……ಫಾದರ್ ಜೇರಾಲ್ಡ್ ಸಾಗರ ಅವರು ಮಾತನಾಡಿ, ದೃಷ್ಟಿದೋಷದ ಎದುರಿಸುತ್ತಿರುವ ಬಡ ಜನರಿಗೆ ಈ
ಶಿಬಿರವು ಆಶಾಕಿರಣವಾಗಿದೆ. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ತಪಾಸಣೆ ಸೌಲಭ್ಯ ಒದಗಿಸುವುದು ಅಗತ್ಯವಾಗಿದೆ ಎಂದರು……ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಜಯಶ್ರೀ ಅಕ್ಕ,
ಪತ್ರಕರ್ತ ವಾಸುದೇವ ಚವ್ಹಾಣ್, ಸಿಸ್ಟರ್ ಮರಿಯಾ ವೇದಿಕೆಯಲ್ಲಿದ್ದರು……57 ಜನರಿಗೆ ತಪಾಸಣೆ: ಈ ಶಿಬಿರದಲ್ಲಿ ಸುಮಾರು 57ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಇವರಲ್ಲಿ ಗಂಭೀರ ಸಮಸ್ಯೆ ಕಂಡುಬಂದ ರೋಗಿಗಳನ್ನು ಶಸ್ತ್ರ ಚಿಕಿತ್ಸೆಗಾಗಿ ಕಲಬುರಗಿಯ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ಉಚಿತ ಸೇವೆಯಲ್ಲಿ ಕರೆದುಕೊಂಡು ಹೋಗಲಾಯಿತು.









Leave a Reply