ಸುದ್ದಿ ಸಂಗ್ರಹ

ಪುಸ್ತಕಗಳು ದೇಶ ಕಟ್ಟುವ ಸಾಧನಗಳು: ಎಚ್.ಬಿ ಪಾಟೀಲ….ಸುದ್ದಿ ಸಂಗ್ರಹ ಶಹಾಬಾದ್
ಪುಸ್ತಕಗಳು ಕೇವಲ ಅಕ್ಷರಗಳ ಗುಚ್ಛವಲ್ಲ, ಅವು ಜ್ಞಾನ, ಮೌಲ್ಯ ಮತ್ತು ಸಂಸ್ಕೃತಿಯ ವಾಹಕಗಳು. ನಾಗರಿಕತೆ ಮತ್ತು ಬ್ರಹ್ಮಾಂಡದ ಅರಿವು ಮೂಡಿಸುವ ಮೂಲಕ ಸದೃಢ ಮಾನವ ಸಂಪನ್ಮೂಲ ನಿರ್ಮಿಸಿ, ದೇಶವನ್ನು ಕಟ್ಟುವ ಶಕ್ತಿ ಪುಸ್ತಕಗಳಿಗಿದೆ ಎಂದು ಉಪನ್ಯಾಸಕ ಹಾಗೂ ಲೇಖಕ ಎಚ್.ಬಿ ಪಾಟೀಲ ಹೇಳಿದರು…..ನಗರದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಜಯ ಕಂಪ್ಯೂಟರ್ ಶಿಕ್ಷಣ ಕೇಂದ್ರ, ಹಾಗೂ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ವಿಶ್ವ ಪುಸ್ತಕ ದಿನಾಚರಣೆ” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳು ವಿತರಿಸಿ, ಮಾತನಾಡಿದ ಅವರು, ವಿದ್ಯಾರ್ಥಿ ದಿಸೆಯಿಂದಲೇ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ
ಬೆಳೆಸಿಕೊಳ್ಳುವುದು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿ ಎಂದರು…..ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಾಸುದೇವ ಚವ್ಹಾಣ ಮಾತನಾಡಿ,”ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗಬಾರದು. ಶ್ರೇಷ್ಠ
ಸಾಧಕರ ಜೀವನ ಚರಿತ್ರೆಗಳು ಓದಿದಾಗ ಮಾತ್ರ ಸಾಧನೆಗೆ ಸ್ಫೂರ್ತಿ ಸಿಗಲು ಸಾಧ್ಯ. ವ್ಯಕ್ತಿತ್ವ ವಿಕಸನಕ್ಕೆ ಪುಸ್ತಕಗಳು ಅತ್ಯಂತ ಪೂರಕವಾಗಿವೆ” ಎಂದರು……ಪುಸ್ತಕಗಳು ಕೇವಲ ಕಾಗದದ ಹಾಳೆಗಳಲ್ಲ, ಅವು ಜ್ಞಾನದ ಗಣಿಗಳು. ಈ ವಿಶ್ವ ಪುಸ್ತಕ ದಿನದಂದು ಕನಿಷ್ಠ ಒಂದು ಪುಸ್ತಕವನ್ನಾದರೂ ಓದುವ ಅಥವಾ ಉಡುಗೊರೆಯಾಗಿ ನೀಡುವ ಸಂಕಲ್ಪ ಮಾಡೋಣ, ಪುಸ್ತಕ ಹಾಗೂ ಪತ್ರಿಕೆಗಳು ಓದುವ ಸಂಸ್ಕೃತಿ ಬೆಳೆಸಿಕೊಂಡರೆ ಮುಂದಿನ ಪೀಳಿಗೆಯ ಯುವಕರ ಭವಿಷ್ಯ ಉಜ್ವಲವಾಗುತದೆ. – ಎಚ್.ಬಿ ಪಾಟೀಲ….ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕಿಯರಾದ ರೇಷ್ಮಾ ಧೋತ್ರೆ, ಪೂರ್ಣಿಮಾ ಪೂಜಾರಿ, ದೇವಕಿ ಕುರುಡೆಕರ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉಪನ್ಯಾಸಕ ಮತ್ತು ಲೇಖಕ



Leave a Reply

Your email address will not be published. Required fields are marked *