ಬಸವ ಜಯಂತಿ: ಮಣ್ಣಿನ ಮುಚ್ಚಳಿಕೆ ಮೂಲಕ ಪಕ್ಷಿಗಳಿಗೆ ನೀರಿನ ವ್ಯವಸ್ಥೆ

ಸುದ್ದಿ ಸಂಗ್ರಹ

ಕಲಬುರಗಿ: ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬಸವ ಜಯಂತಿ ಪ್ರಯುಕ್ತ ಜರುಗುತ್ತಿರುವ ಸರಣಿ ಕಾರ್ಯಕ್ರಮ-12ರಲ್ಲಿ ರವಿವಾರ ನಗರದ ಅಲ್ಲಮಪ್ರಭು ನಗರದಲ್ಲಿ ಬೇಸಿಗೆಯ ಬಿರು ಬಿಸಿಲಿರುವ ಕಾರಣ ಪಕ್ಷಿಗಳಿಗೆ ನೀರು ಕುಡಿಯಲು ಗಿಡಗಳಿಗೆ ಮಣ್ಣಿನ ಮುಚ್ಚಳಿಕೆ ನೇತು ಹಾಕಿ, ಅದರಲ್ಲಿ ನೀರು ಹಾಕಲಾಯಿತು.

ಸಮಾಜ ಸೇವಕ ಮಹೇಶ ನಾಗೂರೆ ನೀರಿಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿ ಜೀವಪರ ಕಾಳಜಿ ಅಗತ್ಯ. ಪ್ರಾಣಿ-ಪಕ್ಷಿಗಳ ಅಸ್ಥಿತ್ವದ ಮಹತ್ವ ಅರಿತು, ಅವುಗಳ ರಕ್ಷಣೆಗೆ ಮುಂದಾಗಬೇಕು. ಕೇವಲ ಮಾನವರಷ್ಟೆ ಬದುಕಿದರೆ ಸಾಲದು. ಬದಲಿಗೆ ಸಕಲ ಜೀವರಾಶಿಗಳು ಉಳಿಯಬೇಕು. ಪ್ರತಿಯೊಬ್ಬರಲ್ಲಿ ಮಾನವೀಯತೆ ಗುಣ ಬೆಳೆಸಿಕೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ. ಬಸವಾದಿ ಶರಣರು ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸಿದವರು. ಅವರ ಜಯಂತಿಯ ಅಂಗವಾಗಿ ಈ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಎಚ್.ಬಿ ಪಾಟೀಲ, ಡಾ.ರಾಜಶೇಖರ ಪಾಟೀಲ, ಶಿವಯೋಗೆಪ್ಪಾ ಎಸ್.ಬಿರಾದಾರ, ಪಿ.ಡಿ ಜೈನ್, ಶಂಭುಲಿಂಗ ಹಡಪದ, ಶಿವಾನಂದ ಮನಮಿ, ಮಲ್ಲಿನಾಥ ಪಾಟೀಲ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *