ಶಹಾಬಾದ: ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಣೆ

ನಗರದ

ಸುದ್ದಿ ಸಂಗ್ರಹ ಶಹಾಬಾದ
ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 119ನೇ ಜನ್ಮದಿನವನ್ನು ನಗರದ ತಾಲೂಕು ಆಡಳಿತ ಕಚೇರಿಯಲ್ಲಿ ಆಚರಿಸಲಾಯಿತು.

ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ತಹಸೀಲ್ದಾರ್ ನೀಲಪ್ರಭಾ ಬಬಲಾದ ಮತ್ತು ನಿವೃತ್ತ ಅಧಿಕಾರಿ ಎಸ್.ಎಸ್ ದಿವಾಕರ್ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು.‌

ಈ ಸಂದರ್ಭದಲ್ಲಿ ಗ್ರೇಡ್- 2 ತಹಸೀಲ್ದಾರ್ ಗುರುರಾಜ ಸಂಗಾವಿ, ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ರಾಜೇಶ ಯನಗುಂಟಿ, ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ, ಪ್ರಮುಖರಾದ ಅಣವೀರಪ್ಪ, ಶಿವರಾಜ ಕೋರೆ, ಶರಣು ಪಗಲಾಪುರ, ಸುಭಾಷ ಸಾಕರೆ, ಕೃಷ್ಣಪ್ಪ ಕರಣಿಕ, ಶ್ರೀಧರ ಕೊಲ್ಲೂರ, ಅಮರ ಕೋರೆ ಮತ್ತು ಸತೀಶ ಕೋಬಾಳ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *